ಚಿಕ್ಕಮಗಳೂರು: ಮೇ 17ರಂದು ದೆಹಲಿಯಿಂದ ಬಂದು ಕ್ವಾರಂಟೈನ್ಗೆ ಒಳಗಾಗಿದ್ದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿ ವರದಿ ನೆಗೆಟಿವ್ ಬಂದಿತ್ತು ಎಂದು ಮನೆಗೆ ಕಳುಹಿಸಲಾಗಿತ್ತು. ಈಗ ಅದೇ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ಶುರುವಾಗಿದೆ.
ವರದಿ ನೆಗೆಟಿವ್ ಬಂದಿದ್ದ ವ್ಯಕ್ತಿಗೆ ಕೊರೊನಾ... ಮನೆಗೆ ಕಳಿಸಿ ಯಡವಟ್ಟು ಮಾಡಿಕೊಂಡಿತೇ ಜಿಲ್ಲಾಡಳಿತ! - Chikkamagaluru Health Department
ದೆಹಲಿಯಿಂದ ಬಂದು ಕ್ವಾರಂಟೈನ್ಗೆ ಒಳಗಾಗಿದ್ದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿ ವರದಿ ನೆಗೆಟಿವ್ ಬಂದಿತ್ತು ಎಂದು ಮನೆಗೆ ಕಳುಹಿಸಲಾಗಿತ್ತು. ಈಗ ಮತ್ತದೇ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ಶುರುವಾಗಿದೆ.
ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ತಾವೇ ಮಾಡಿಕೊಂಡ ಯಡವಟ್ಟಿನಿಂದ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗಿವೆ. ಅಧಿಕಾರಿಗಳು ಮಾಡಿರುವ ಯಡವಟ್ಟು ಶೃಂಗೇರಿಯ ಜನರಲ್ಲಿ ಆತಂಕ ಮೂಡಿಸಿದೆ. ಹೌದು, ಕೊರೊನಾ ನೆಗೆಟಿವ್ ಎಂದು ವರದಿ ಬಂದ ಕಾರಣ ವ್ಯಕ್ತಿಯೊಬ್ಬನನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿತ್ತು. ಈಗ ಅದೇ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆ ವ್ಯಕ್ತಿಯ ಸಂಬಂಧಿಕರು, ಸುತ್ತಮುತ್ತ ವಾಸಿಸುವವರಲ್ಲಿ ಆಂತಂಕ ಹೆಚ್ಚಿಸಿದೆ.
ಸದ್ಯ ಆರೋಗ್ಯ ಇಲಾಖೆ ಸೋಂಕಿತ ವ್ಯಕ್ತಿಯ ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರ ಹುಡುಕಾಟದಲ್ಲಿ ತೊಡಗಿದೆ. ಸೋಂಕಿತ ವ್ಯಕ್ತಿಯ ಗ್ರಾಮಕ್ಕೆ ಶೃಂಗೇರಿಯ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ತಪಾಸಣೆಯಲ್ಲಿ ತೊಡಗಿದ್ದಾರೆ.