ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು : ಹೆದ್ದಾರಿ ಬಂದ್‍ ಮಾಡಿ ಪ್ರತಿಭಟಿಸುತ್ತಿದ್ದ ರೈತರ ಬಂಧನ.. - ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಂಪೂರ್ಣ ಬೆಂಬಲ

ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು, ನೂತನ ಕೃಷಿ ಕಾಯ್ದೆಯಿಂದ ರೈತರಿಗೆ ಇರೋ ಅನುಕೂಲಗಳಿಗಿಂತ ಅನಾನುಕೂಲವೇ ಹೆಚ್ಚು. ಈ ಕಾಯ್ದೆಯೇ ಅರ್ಥಹೀನವಾದ್ದರಿಂದ ಕೇಂದ್ರ ಕೂಡಲೇ ನೂತನ ಕೃಷಿ ಕಾಯ್ದೆಗಳನ್ನ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ..

chikkamagaluru-arrest-of-farmers-
ಹೆದ್ದಾರಿ ಬಂದ್‍ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಂಧನ

By

Published : Feb 6, 2021, 4:39 PM IST

ಚಿಕ್ಕಮಗಳೂರು :ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಹೆದ್ದಾರಿ ಬಂದ್‍ಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಹೆದ್ದಾರಿ ಬಂದ್‍ ಮಾಡಿ ಪ್ರತಿಭಟಿಸುತ್ತಿದ್ದ ರೈತರ ಬಂಧನ

ಓದಿ: ಕೇಂದ್ರ ಸರ್ಕಾರ ರೈತರನ್ನು ಅಪರಾಧಿಗಳ ಪಟ್ಟಿಗೆ ಸೇರಿಸುತ್ತಿದೆ: ವೈಎಸ್​​ವಿ ದತ್ತಾ

ಚಿಕ್ಕಮಗಳೂರಿನಿಂದ ಬೇಲೂರು, ಹಾಸನ ಮಾರ್ಗವಾಗಿ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಚಿಕ್ಕಮಗಳೂರಿನ ಬೇಲೂರು ವೃತ್ತದ ಬಳಿಯ ಪೈ ಕಲ್ಯಾಣ ಮಂಟಪದ ಬಳಿ ಹೆದ್ದಾರಿ ತಡೆದು ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು, ನೂತನ ಕೃಷಿ ಕಾಯ್ದೆಯಿಂದ ರೈತರಿಗೆ ಇರೋ ಅನುಕೂಲಗಳಿಗಿಂತ ಅನಾನುಕೂಲವೇ ಹೆಚ್ಚು. ಈ ಕಾಯ್ದೆಯೇ ಅರ್ಥಹೀನವಾದ್ದರಿಂದ ಕೇಂದ್ರ ಕೂಡಲೇ ನೂತನ ಕೃಷಿ ಕಾಯ್ದೆಗಳನ್ನ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ರಸ್ತೆ ತಡೆದು ಪ್ರತಿಭಟನೆ ನಡೆಸ್ತಿದ್ದ ನೂರಕ್ಕೂ ಹೆಚ್ವು ರೈತರನ್ನ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ರೈತರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details