ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು. ಮಳೆಗಾಲದಲ್ಲಿ ಝರಿಗಳು ಜೀವ ಕಳೆಯನ್ನ ಪಡೆದುಕೊಳ್ಳುತ್ತವೆ. ಬಂಡೆಗಳ ಮೇಲಿನಿಂದ ಧುಮ್ಮಿಕ್ಕೋ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತವೆ. ನಿರಂತರ ವರ್ಷಧಾರೆಯಿಂದ ಬೆಟ್ಟಗಳು ಹಸಿರೊದ್ದು ಕಂಗೊಳಿಸುತ್ತವೆ.
ವರುಣನ ಸಿಂಚನಕ್ಕೆ ಭೂಲೋಕದ ಸ್ವರ್ಗವಾದ ಚಾರ್ಮಾಡಿ, ಜಲಧಾರೆಗಳ ಸೌಂದರ್ಯ ಇಮ್ಮಡಿ - Charmadi Ghat news
ಈ ಮಾರ್ಗವಾಗಿ ಸಾಗುವಪ್ರವಾಸಿಗರು ಕೆಲಕಾಲ ಅಲ್ಲಲ್ಲಿ ಧುಮ್ಮಿಕ್ಕುವ ಜಲಧಾರೆಗಳ ಸೌಂರ್ಯ ಸವಿದು ಮುಂದೆ ಸಾಗುತ್ತಿದ್ದಾರೆ. ವರುಣನ ಸಿಂಚನದಿಂದ ಕಾಫಿನಾಡು ಈಗ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತಿದೆ.
ವರುಣನ ಸಿಂಚನಕ್ಕೆ ಭೂಲೋಕದ ಸ್ವರ್ಗವಾದ ಚಾರ್ಮಾಡಿ
ಸತತ ಮಳೆಯಿಂದ ಚಾರ್ಮಾಡಿ ಘಾಟ್ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವವರು ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ರಭಸವಾಗಿ ಚಿಮ್ಮೋ ಜಲಪಾತಗಳು ರಮಣೀಯ ನೋಟವನ್ನ ಸೃಷ್ಟಿಸಿವೆ.
ಈ ಮಾರ್ಗವಾಗಿ ಸಾಗುವ ಪ್ರಯಾಣಿಕರು ಕೆಲಕಾಲ ಅಲ್ಲಲ್ಲಿ ಧುಮ್ಮಿಕ್ಕುವ ಜಲಧಾರೆಗಳ ಸೌಂದರ್ಯ ಸವಿದು ಮುಂದೆ ಸಾಗುತ್ತಿದ್ದಾರೆ. ವರುಣನ ಸಿಂಚನದಿಂದ ಕಾಫಿನಾಡು ಈಗ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತಿದೆ.