ಚಿಕ್ಕಮಗಳೂರು:ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳಲು ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಜಾಮೀನು ಸ್ವಾಧೀನಕ್ಕೆ ವಾಮಾಚಾರ ಪ್ರಯೋಗ? - ಜಮೀನಿನ ಆಸೆಗೆ ವಾಮಾಚಾರ ಪ್ರಯೋಗ
ಜಮೀನು ಮಾರಾಟ ಮಾಡಲಿ ಎಂಬ ಕಾರಣಕ್ಕೆ ಹೊಲದ ಸುತ್ತ ಗುಂಡಿ ತೆಗೆದು ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಹೊಲದ ಸುತ್ತ ಗುಂಡಿ ತೆಗೆದು ವಾಮಾಚಾರ
ವಾಸುದೇವಿ ಶೆಟ್ಟಿ ಎನ್ನುವರಿಗೆ ಸೇರಿದ ಜಮೀನಲ್ಲಿ ವಾಮಾಚಾರ ಮಾಡಲಾಗಿದೆ. ಜಮೀನು ಮಾರಾಟ ಮಾಡಲಿ ಎಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಕಿಡಿಗೇಡಿಗಳ ಕೃತ್ಯದಿಂದ ಭೂಮಿ ಮಾಲೀಕ ವಾಸುದೇವಿ ಶೆಟ್ಟಿ ಆತಂಕಕ್ಕೆ ಒಳಗಾಗಿದ್ದಾರೆ.