ಚಿಕ್ಕಮಗಳೂರು: ನೀನೆ ನನ್ನ ಆಹಾರವೆಂದು ಹರಸಾಹಸಪಟ್ಟು ಕಪ್ಪೆಯನ್ನ ಮರದ ಬಳ್ಳಿಯ ನಡುವೆ ಸುತ್ತಿಕೊಂಡು ಹಾವೊಂದು ತಿಂದು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಸಮೀಪದ ಕೆರೆಮನೆಯಲ್ಲಿ ನಡೆದಿದೆ.
ಬಿಲ್ ಮುರಿ (common bronze back tree snake) ಎಂಬ ಅಪರೂಪದ ಹಾವೊಂದು ಕಪ್ಪೆ ಬೇಟೆಯಾಡಿದೆ. ಸಣ್ಣ ಪಕ್ಷಿಗಳು, ಕಪ್ಪೆಗಳನ್ನ ತಿಂದು ಬದುಕುವ ಅಪರೂಪದ ಹಾವು ಇದಾಗಿದ್ದು, ಪೊದೆ, ಮರಗಳಲ್ಲಿ ಈ ಹಾವು ವಾಸ ಮಾಡುವುದು ವಾಡಿಕೆ. ಮರದಲ್ಲಿ ಬಳ್ಳಿಯಂತೆ ನೇತಾಡಿಕೊಂಡಿರುವ ವಿಷಕಾರಿಯಲ್ಲದ ತುಂಬಾ ಅಪರೂಪದ ಹಾವು ಇದು.