ಚಿಕ್ಕಮಗಳೂರು:ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕಾಣಸಿಗುತ್ತಿದ್ದ ಅದೆಷ್ಟೋ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿ ಮಳೆಗಾಲ ಆರಂಭದ ಸಮಯದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಕ್ರೀಡೆಗಳು ಇಲ್ಲದಂತಾಗುತ್ತಿವೆ. ರಾಜ್ಯದ ಪ್ರಸಿದ್ಧ ಹಾಗೂ ಚಿರಪರಿಚಿತ ಸಂಸ್ಥೆಯೊಂದು ಇಂತಹ ಗ್ರಾಮೀಣ ಕಲೆಗಳನ್ನ ಉಳಿಸುವ ಪ್ರಯತ್ನ ಮಾಡಿದೆ.
ಹೌದು, ಒಂದು ಕಡೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಭತ್ತದ ನಾಟಿಗೆ ಸಿದ್ಧವಾಗಿ ನಿಂತಿರುವ ನೂರಾರು ಎಕರೆಯ ಕೆಸರು ಗದ್ದೆ. ಇನ್ನೊಂದು ಭಾಗದಲ್ಲಿ ಕೆಸರು ಗದ್ದೆಯಲ್ಲಿಯೇ ಮಲೆನಾಡಿನ ಉಡುಗೆ ತೊಟ್ಟು ಗದ್ದೆಯಲ್ಲಿ ನೃತ್ಯ ಮಾಡುತ್ತಿರುವ ನೂರಾರು ಮಹಿಳೆಯರು, ಪುರುಷರು ಹಾಗೂ ಮಕ್ಕಳು. ಈ ಮಳೆಗಾಲದಲ್ಲಿ ಈ ರೀತಿಯ ಅದ್ಭುತ ಸಾಂಸ್ಕೃತಿಕ ವೈಭವ ಕಂಡು ಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ.