ಕರ್ನಾಟಕ

karnataka

ETV Bharat / state

ಮೂಡಿಗೆರೆ: ಆಂಬುಲೆನ್ಸ್​ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಸ್ಸೋಂ ಮೂಲದ ಮಹಿಳೆ!

ಕಾಫಿ ಎಸ್ವೇಟ್​​ನಲ್ಲಿ ಹಲವಾರು ದಿನಗಳಿಂದ ಅಸ್ಸೋಂ ಮೂಲದ ಕಾರ್ಮಿಕ ಮಹಿಳೆ ಫಾತಿಮಾ ಕೆಲಸ ಮಾಡುತ್ತಿದ್ದು, ಇಂದು ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಆಂಬುಲೆನ್ಸ್ ಮೂಲಕ ಕರೆದುಕೊಂಡು ಬರುವಾಗ ವಾಹನದ ಒಳಗಡೆಯೇ ಮಗುವಿಗೆ ಜನ್ಮ ನೀಡಿದ್ದಾಳೆ.

birth to a baby girl in ambulance
ಅಂಬ್ಯುಲೆನ್ಸ್​ಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಸ್ಸೋಂ ಮೂಲದ ಮಹಿಳೆ

By

Published : Nov 30, 2020, 9:59 PM IST

Updated : Nov 30, 2020, 10:06 PM IST

ಚಿಕ್ಕಮಗಳೂರು: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆ ಆಂಬುಲೆನ್ಸ್​​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಕಾಫಿ ಎಸ್ವೇಟ್​ನಲ್ಲಿ ಹಲವಾರು ದಿನಗಳಿಂದ ಅಸ್ಸೋಂ ಮೂಲದ ಕಾರ್ಮಿಕ ಮಹಿಳೆ ಫಾತಿಮಾ ಕೆಲಸ ಮಾಡುತ್ತಿದ್ದು, ಇಂದು ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಸಮಾಜ ಸೇವಕ ಆರೀಫ್ ಎಂಬುವರಿಗೆ ಫೋನ್ ಮೂಲಕ ವಿಚಾರ ತಿಳಿಸಿದ್ದು, ಅವರು ತಮ್ಮ ಆಂಬುಲೆನ್ಸ್ ಮೂಲಕ ಕಾಫಿ ತೋಟಕ್ಕೆ ಬಂದಿದ್ದಾರೆ.

ಆಂಬುಲೆನ್ಸ್​ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಸ್ಸೋಂ ಮೂಲದ ಮಹಿಳೆ

ಆರೀಫ್ ಅವರು ಫಾತೀಮಾಳನ್ನು ಮೂಡಿಗೆರೆ ಸರ್ಕಾರಿ ಆಸ್ವತ್ರೆಗೆ ತಮ್ಮ ಆಂಬುಲೆನ್ಸ್​ನಲ್ಲಿ ಕರೆದುಕೊಂಡು ಬರುವ ವೇಳೆ ಫಾತೀಮಾ ಆಂಬುಲೆನ್ಸ್​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Last Updated : Nov 30, 2020, 10:06 PM IST

ABOUT THE AUTHOR

...view details