ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದಲ್ಲಿ ವಾರದಿಂದ ಬಿದ್ದಲ್ಲೇ ಬಿದ್ದು ನರಳುತ್ತಿರುವ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಸಮಾಜ ಸೇವಕ ಆರೀಫ್ ಅವರ ಗಮನಕ್ಕೆ ತಂದಿದ್ದಾರೆ.
ಬೀದಿಯಲ್ಲಿ ಬಿದ್ದು ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಸಮಾಜ ಸೇವಕ ಆರೀಫ್
ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದಲ್ಲಿ ವಾರದಿಂದ ಬಿದ್ದಲ್ಲೇ ಬಿದ್ದು ನರಳುತ್ತಿರುವ ವ್ಯಕ್ತಿಗೆ ಸಮಾಜ ಸೇವಕ ಆರೀಫ್ ಅವರು ಚಿಕಿತ್ಸೆ ನೀಡಿ ತನ್ನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಚಿಕಿತ್ಸೆ ನೀಡಿದ ಸಮಾಜ ಸೇವಕ ಆರೀಫ್
ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೀಫ್, ಆ ವ್ಯಕ್ತಿಯ ಬಳಿ ಬಂದು ವಿವರಣೆ ಪಡೆದುಕೊಂಡಿದ್ದಾರೆ. ಈತ ಅನಾಥನಾಗಿದ್ದು, ಕೇರಳದಿಂದ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ನಂತರ ಆ ಭಾಗಕ್ಕೆ ಸಂಪೂರ್ಣ ಚಿಕಿತ್ಸೆ ನೀಡಿ ಆತನಿಗೆ ಬಟ್ಟೆಯನ್ನು ತೊಡಿಸಿ ಆತನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆರೀಫ್ ಅವರ ಸೇವೆಗೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.