ಚಿಕ್ಕಮಗಳೂರು: ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಪಂಚಾಯ್ತಿ ಮುಂಭಾಗದಲ್ಲಿ ಜನರು ಪ್ರತಿಭಟನೆ ನಡೆಸಿರುವ ಘಟನೆ ಕಳಸ ತಾಲೂಕಿನ ಇಡಕಣಿ ಗ್ರಾಮದಲ್ಲಿ ನಡೆದಿದೆ.
ಗ್ರಾ.ಪಂ.ನಲ್ಲಿ ಅವ್ಯವಹಾರ ಆರೋಪ.. ಗ್ರಾಮಸ್ಥರ ಪ್ರತಿಭಟನೆ..! - ಗ್ರಾ.ಪಂ.ನಲ್ಲಿ ಅವ್ಯವಹಾರ ನಡೆದಿರುವ ಆರೋಪ
ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿ ಚಿಕ್ಕಮಗಳೂರಿನ ಕಳಸ ತಾಲೂಕಿನ ಇಡಕಣಿ ಗ್ರಾಮದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಗ್ರಾ.ಪಂ.ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರ ಪ್ರತಿಭಟನೆ
ಭದ್ರ ಕಾಳಿ ಕಾಲೋನಿಗೆ ಮಂಜೂರಾದ ಸಮುದಾಯ ಭವನಕ್ಕೆ ಇಂಟರ್ ಲಾಕ್ ಅಳವಡಿಸದೆ, ಸರ್ಕಾರದ ಹಣವನ್ನು ಗ್ರಾಪಂ ಆಡಳಿತ ವರ್ಗ ಹಾಗೂ ಸದಸ್ಯರು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಜನತೆ ಪ್ರತಿಭಟನೆ ನಡೆಸಿದರು.
ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಾದ ಹೆಮ್ಮಕ್ಕಿ, ಇಡಕಣಿ, ನಾಗಸಂಪಿಗೆ, ಬರ್ಗಲ್ ಹರಿಜನ ಕಾಲೋನಿಗಳಿಗೆ ನಿರ್ಮಿಸಿದ, ರಸ್ತೆ, ಚರಂಡಿ ಹಾಗೂ ಪಂಚಾಯ್ತಿಯಿಂದ ನೀಡುವ ಕಸ ಸಂಗ್ರಹಣೆ ಬಕೆಟ್ ವಿತರಣೆಯಲ್ಲಿ ಗೋಲ್ ಮಾಲ್ ಆಗಿದೆ. ಕೂಡಲೇ ಅವ್ಯವಾಹರದ ತನಿಖೆ ನಡೆಸಿ ತಪಿತಸ್ಥ ಅಧಿಕಾರಿಗಳು ಹಾಗೂ ಸದಸ್ಯರಿಗೆ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.