ಕರ್ನಾಟಕ

karnataka

ETV Bharat / state

ಕಾರು-ಟಿಪ್ಪರ್​​​ ನಡುವೆ ಡಿಕ್ಕಿ: ಸ್ಥಳದಲ್ಲೇ ಪಾದಚಾರಿ ಸಾವು - Accident between Car-tipper

ಚಿಕ್ಕಮಗಳೂರು ನಗರದ ಹೊರವಲಯದ ರಾಂಪುರದ ಅಂಬಿಕಾ ಸಾಮಿಲ್ ಬಳಿ ಕಾರು ಮತ್ತು ಟಿಪ್ಪರ್​ ನಡುವೆ ಡಿಕ್ಕಿ ಸಂಭಂವಿಸಿದೆ. ಪರಿಣಾಮ ಸ್ಥಳದಲ್ಲೇ ಪಾದಚಾರಿ ಸಾವನ್ನಪ್ಪಿದ್ದಾನೆ.

ಕಾರು-ಟಿಪ್ಪರ್​​ ನಡುವೆ ಡಿಕ್ಕಿ
ಕಾರು-ಟಿಪ್ಪರ್​​ ನಡುವೆ ಡಿಕ್ಕಿ

By

Published : Apr 29, 2020, 4:55 PM IST

ಚಿಕ್ಕಮಗಳೂರು: ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭಂವಿಸಿದ ಪರಿಣಾಮ ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕಾರು-ಟಿಪ್ಪರ್​​ ನಡುವೆ ಡಿಕ್ಕಿ

ಚಿಕ್ಕಮಗಳೂರು ನಗರದ ಹೊರವಲಯದ ರಾಂಪುರದ ಅಂಬಿಕಾ ಸಾಮಿಲ್ ಬಳಿ ಈ ಘಟನೆ ನಡೆದಿದೆ. ಕಾರಿಗೆ ಟಿಪ್ಪರ್‌ ಡಿಕ್ಕಿಯಾದ ಕೂಡಲೇ ಕಾರನ್ನು ನಿಯಂತ್ರಣ ಮಾಡಲಾಗದೆ ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗೆ ಗುದ್ದಿದೆ. ಪರಿಣಾಮ ಪಾದಾಚಾರಿ ಗಣೇಶ್‌ (65) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರು ಗವನಹಳ್ಳಿ ನಿವಾಸಿಯಾಗಿದ್ದಾರೆ.

ಕಾರು-ಟಿಪ್ಪರ್​​ ನಡುವೆ ಡಿಕ್ಕಿ

ಕಾರಿನಲ್ಲಿದ್ದ ಚಾಲಕ ಮತ್ತು ಆತನ ತಂದೆಗೆ ತೀವ್ರ ಪೆಟ್ಟಾಗಿದೆ. ಇಬ್ಬರನ್ನು ಜಿಲ್ಲಾಸ್ವತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ABOUT THE AUTHOR

...view details