ಕರ್ನಾಟಕ

karnataka

ETV Bharat / state

"ಸಿದ್ಧಾರ್ಥ ಬ್ಲಾಕ್"​.. ಕಾಫಿ ತೋಟಕ್ಕೆ ಕೆಫೆ ಕಾಫಿ ಡೇ ಸಂಸ್ಥಾಪಕನ ಹೆಸರಿಟ್ಟ ಅಭಿಮಾನಿ! - etv bharat

ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಅವರ ಹೆಸರು ಶಾಶ್ವತವಾಗಿರಬೇಕೆಂದು ಅವರ ಅಭಿಮಾನಿಯೊಬ್ಬ ತನ್ನ ಕಾಫಿ ತೋಟಕ್ಕೆ ಸಿದ್ಧಾರ್ಥ ಬ್ಲಾಕ್ ಎಂದು ನಾಮಕರಣ ಮಾಡಿ ತನ್ನ ಅಭಿಮಾನ ಮೆರೆದಿದ್ದಾನೆ.

ಸಿದ್ಧಾರ್ಥ ಬ್ಲಾಕ್

By

Published : Aug 3, 2019, 6:44 PM IST

ಚಿಕ್ಕಮಗಳೂರು:ಕಳೆದ ಐದು ದಿನಗಳ ಹಿಂದೆ ಕೆಫೆ ಕಾಫಿ ಡೇ ಸಂಸ್ಥಾಪಕ ಹಾಗೂ ಕರುನಾಡಿನ ಉದ್ಯಮಿ ಸಿದ್ಧಾರ್ಥ ಹೆಗ್ಡೆ ಅವರು ಮೃತಪಟ್ಟ ಹಿನ್ನೆಲೆ ಚಿಕ್ಕಮಗಳೂರಿನ ಓರ್ವ ಯುವಕ ಅವರ ಮೇಲೆ ಅಭಿಮಾನ ತೋರ್ಪಡಿಸಿಕೊಂಡಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹನುಮನಹಳ್ಳಿಯಲ್ಲಿರುವ ಗುರು ಎಂಬ ಯುವಕ ತನ್ನ ಕಾಫಿ ತೋಟಕ್ಕೆ ಸಿದ್ಧಾರ್ಥ ಅವರ ಹೆಸರು ಇಟ್ಟು ಶಾಶ್ವತವಾಗಿ ಅವರ ಹೆಸರು ಉಳಿಯುವಂತೆ ಮಾಡಿದ್ದಾರೆ.

ತನ್ನ ಕಾಫಿ ತೋಟಕ್ಕೆ ಸಿದ್ಧಾರ್ಥ ಬ್ಲಾಕ್ ಎಂದು ಹೆಸರಿಟ್ಟು ಅವರ ಮೇಲಿನ ಅಭಿಮಾನವನ್ನು ಮೆರೆದಿದ್ದಾನೆ. ಸಿದ್ದಾರ್ಥ ಹೆಗ್ಡೆ ಅವರ ಹೆಸರು ಕೊನೆಯ ತನಕ ಇರಬೇಕು ಎಂಬ ಅಭಿಲಾಷೆಯಿಂದ ಈ ಯುವಕ ಕಾಫಿ ತೋಟಕ್ಕೆ ಅವರ ಹೆಸರನ್ನು ನಾಮಕರಣ ಮಾಡಿದ್ದಾನೆ.

ABOUT THE AUTHOR

...view details