ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಅಂತರ್ಜಾತಿ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆಗೆ ಶರಣು - ಅಂತರ್ಜಾತಿ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮನವಾಳ ಗ್ರಾಮದ ಹೊರವಲಯದಲ್ಲಿ ಮಹಿಳೆಯೋರ್ವರು ಡೆತ್​ನೋಟ್​ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Women committed suicide
ಮಹಿಳೆ ಆತ್ಮಹತ್ಯೆ

By

Published : Sep 5, 2021, 8:42 PM IST

ಚಿಕ್ಕಬಳ್ಳಾಪುರ:ಅಂತರ್ಜಾತಿ ವಿವಾಹವಾಗಿದ್ದ ಮಹಿಳೆ ಡೆತ್​ನೋಟ್​ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮನವಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಪರ್ವಿನಾ ಮುಬಾರಕ್ ಅಲಿಯಾಸ್ ಶಿಲ್ಪ(30) ಮೃತ ಮಹಿಳೆ. ಕಳೆದ 8 ವರ್ಷಗಳ ಹಿಂದೆ ಮಹಿಳೆ ಗ್ರಾಮದ ಶಿವಪ್ಪ ಎಂಬುವವರನ್ನು ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ಅನಾರೋಗ್ಯ ಕಾರಣದಿಂದ ಶಿವಪ್ಪ ಮೃತಪಟ್ಟಿದ್ದರು.

ತದನಂತರ ತಾಲೂಕಿನ ವಾಟದಹೊಸಹಳ್ಳಿ ಗ್ರಾಮದ ಯುವಕನೋರ್ವನ ಜೊತೆ ಪರ್ವಿನಾ ಸ್ನೇಹ ಮಾಡಿಕೊಂಡಿದ್ದರು. ಆದರೆ ಕಳೆದೊಂದು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಆ ಯುವಕ ಸಾವನ್ನಪ್ಪಿದ್ದನು.

ಇದರಿಂದ ಮನನೊಂದು ಮನವಾಳ ಗ್ರಾಮದ ಬಾವಿಯ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸರ್ಕಲ್ ಇನ್​ಸ್ಪೆಕ್ಟರ್ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ: ಮಕ್ಕಳಿಲ್ಲದ ನೋವು ಮರೆಸಿದ ಶ್ವಾನಪ್ರೀತಿ : ನಿತ್ಯವೂ ಬೀದಿನಾಯಿಗಳಿಗೆ ಬಾಡೂಟ ಹಾಕುವ ಅಪರೂಪದ ದಂಪತಿ

ABOUT THE AUTHOR

...view details