ಕರ್ನಾಟಕ

karnataka

ETV Bharat / state

ಪತಿಯನ್ನು ಕೋಳಿ ಸುಡುವ ಬರ್ನರ್ ನಲ್ಲಿ ಸುಟ್ಟು ಕೊಲೆ.. ಚಾಲಾಕಿ ಪತ್ನಿ, ಪ್ರಿಯಕರ ಅಂದರ್​ - Wife killed her husband by burning him in a chicken burner

ಪತ್ನಿಯೋರ್ವಳು ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನೇ ಕೊಲೆ ಮಾಡಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

wife-killed-her-husband-by-burning-him-in-a-chicken-burner
ಪತಿಯನ್ನು ಕೋಳಿ ಸುಡುವ ಬರ್ನರ್ ನಲ್ಲಿ ಸುಟ್ಟು ಕೊಲೆ ಮಾಡಿದ ಪತ್ನಿ

By

Published : Jul 2, 2022, 3:22 PM IST

ಚಿಕ್ಕಬಳ್ಳಾಪುರ: ಪಾಪಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕೋಳಿ ಸುಡುವ ಬರ್ನರ್ ನಲ್ಲಿ ಸುಟ್ಟು ಕೊಲೆ ಮಾಡಿ ಆತ್ಮಹತ್ಯೆ ಎಂದು ಪೊಲೀಸರಿಗೆ ದೂರು ನೀಡಿ ಸಿಕ್ಕಿಬಿದ್ದ ಪ್ರಕರಣ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಗಂಜಿಗುಂಟೆ ಗ್ರಾಮದ ಮೆಹರ್ ಮತ್ತು ಆಕೆಯ ಪ್ರಿಯಕರ ತೌಸಿಫ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪತಿಯನ್ನು ಕೋಳಿ ಸುಡುವ ಬರ್ನರ್ ನಲ್ಲಿ ಸುಟ್ಟು ಕೊಲೆ ಮಾಡಿದ ಪತ್ನಿ

ಕಳೆದ 8 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಆರೋಪಿ ಮೆಹರ್ ಪ್ರಿಯಕರ ತೌಸಿಫ್ ಜೊತೆ ಸೇರಿ ತನ್ನ ಪತಿ ದಾದಾಪೀರ್​ನನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಆರೋಪಿ ಮೆಹರ್ ತನ್ನ ಗಂಡ ದಾದಾಪೀರ್ ಗೆ ನಿದ್ರೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ, ಬಳಿಕ ಕೋಳಿ ಸುಡುವ ಗ್ಯಾಸ್ ಗನ್ ನಿಂದ ಸುಟ್ಟು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮೃತ ದಾದಾಪೀರ್ ನ ಸಹೋದರಿ ರೇಷ್ಮಾ ತಾಜ್ ಕೊಲೆ ಎಂದು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮೆಹರ್ ಹಾಗೂ ತೌಸಿಫ್​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಓದಿ :ಸುಲಿಗೆ ಮಾಡಿ ಧರ್ಮದೇಟು ತಿಂದ ಕಳ್ಳತನದ ಆರೋಪಿಯಿಂದಲೇ ಪೊಲೀಸ್ ಠಾಣೆಗೆ ದೂರು

ABOUT THE AUTHOR

...view details