ಚಿಕ್ಕಬಳ್ಳಾಪುರ:-ಗಣಿಗಾರಿಕೆಯಿಂದ ಭೂಕಂಪ ಸಂಭವಿಸಿದೆ ಎಂದು ಸಾಬೀತಾದ್ರೆ ಈಕ್ಷಣದಿಂದಲೇ ಗಣಿಗಾರಿಕೆ ನಿಲ್ಲಿಸಲು ತಯಾರಿದ್ದೇನೆಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಹಲವೆಡೆ ಕಳೆದ ಒಂದು ತಿಂಗಳಿಂದ ಭೂಕಂಪ ಸಂಭವಿಸಿದ್ದು, ಗ್ರಾಮಸ್ಥರು ಭಯದ ವಾತವರಣದಲ್ಲಿ ಕಾಲ ಕಳೆಯುವಂತಾಗಿತ್ತು. ಸದ್ಯ ಶನಿವಾರ ಅರೋಗ್ಯ ಸಚಿವ ಸುಧಾಕರ್ ಹಾಗೂ ಭೂವಿಜ್ಞಾನಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುಧಾಕರ್, ಎರಡು ಮೂರು ಗ್ರಾಮಗಳಲ್ಲಿ ಒಂದೆರಡು ಕೆಲವು ಬಾರಿ ಭೂಮಿ ಕಂಪಿಸಿದ ಅನುಭವ ಮತ್ತು ಕೆಲವು ಮನೆಯಲ್ಲಿ ಬಿರುಕು ಸಂಭವಿಸಿದೆ ಎಂದು ಕೇಳಿ ಬಂದಿದೆ. ಇಲ್ಲಿನ ಸ್ಥಳೀಯ ಜನರು ಭೂಕಂಪದಿಂದ ಈಗಾಗುತ್ತಿದೆ ಎಂದು ಭಾವಿಸಿದ್ದಾರೆ. ಅದಕ್ಕೆ ನಾನು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಭೂ ವಿಜ್ಜಾನಿಗಳನ್ನು ಕರೆಸಿ ಅಧ್ಯಯನ ಮಾಡಲಾಗಿದೆ. ಇದರ ವರದಿಯನ್ನು ಅವರು ಮೌಖಿಕವಾಗಿ ನೀಡಿದ್ದಾರೆ.
ವರದಿಯ ಪ್ರಕಾರ , ಕಳೆದ ಅನೇಕ ವರ್ಷಗಳಿಂದ ಇಲ್ಲಿ ಮಳೆಯಿಲ್ಲದೆ ಅಂತರ್ಜಲ ಕ್ಷೀಣಿಸಿದೆ, 1200 ಅಡಿವರೆಗೂ ಕೂಡ ಅಂತರ್ಜಲ ಕ್ಷೀಣಿಸಿದೆ. ಒಮ್ಮೆಲೆ ಮಳೆ ಬಿದ್ದಿದ್ದರಿಂದ ಅಂತರ್ಜಲ ವೃದ್ಧಿಯಾಗಿರುವುದೆ. ಹೈಟ್ರೋಸೆಲ್ಫೋಸಿಟಿ ನೀರಿನಿಂದ ಭೂಮಿಯಪದರದಲ್ಲಿ ಶಬ್ಧ ಉಂಟು ಮಾಡುತ್ತಿದೆ. ಅದನ್ನು ಲಿಖಿತ ವರದಿ ನೀಡಲು ಹೇಳಿದ್ದೇನೆ. ಇದು ಸುರಕ್ಷಿತವಾದ ಬೌಗೋಳಿಕ ಪ್ರದೇಶವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಭೂಕಂಪವಾಗುವ ಸಾಧ್ಯತೆಯಿಲ್ಲ ಎಂದು ತಿಳಿಸಿದ್ದಾರೆ.