ಕರ್ನಾಟಕ

karnataka

ETV Bharat / state

ಅನರ್ಹ ಶಾಸಕರಿಗೆ ಇರುವ ಗೌರವ ನಮಗಿಲ್ಲ: ಎಂ.ಕೃಷ್ಣಾರೆಡ್ಡಿ - ಚಿಂತಾಮಣಿ ಶಾಸಕ ಹಾಗೂ ಉಪಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ

ಅನರ್ಹ ಶಾಸಕರಿಗೆ ಇರುವ ಗೌರವ ನಮಗಿಲ್ಲ ಎಂದು ಚಿಂತಾಮಣಿ ಶಾಸಕ ಹಾಗೂ ಉಪ ಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ಸ್ವಕ್ಷೇತ್ರದಲ್ಲಿ ಹೇಳಿಕೆ ನೀಡಿದ್ದಾರೆ.

ಎಂ. ಕೃಷ್ಣಾರೆಡ್ಡಿ

By

Published : Oct 23, 2019, 10:06 PM IST

ಚಿಕ್ಕಬಳ್ಳಾಪುರ:ಅನರ್ಹ ಶಾಸಕರಿಗೆ ಇರುವ ಗೌರವ ನಮಗಿಲ್ಲ ಎಂದು ಚಿಂತಾಮಣಿ ಶಾಸಕ ಹಾಗೂ ಉಪ ಸಭಾಧ್ಯಕ್ಷ ಎಂ. ಕೃಷ್ಣಾರೆಡ್ಡಿ ಸ್ವಕ್ಷೇತ್ರದಲ್ಲಿ ಹೇಳಿಕೆ ನೀಡಿದ್ದಾರೆ.

ಅನುದಾನ ನೀಡುವಲ್ಲಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ಸಿಂಹಪಾಲನ್ನು ನೀಡಲಾಗುತ್ತಿದೆ. ಸುಪ್ರೀಂಕೋರ್ಟ್​​ನಲ್ಲಿ ತೀರ್ಪು ಬರುವವರೆಗೂ ಅನರ್ಹ ಶಾಸಕರು ಶಾಸಕರಲ್ಲದಿದ್ದರೂ ಶಾಸಕರು ಎಂದು ಮುಖ್ಯಮಂತ್ರಿಗಳಿಗೆ ಪತ್ರವನ್ನು ಕೊಡುತ್ತಿದ್ದಾರೆ. ಅನರ್ಹ ಶಾಸಕರ ಪತ್ರಕ್ಕೆ ಸಿಎಂ ಕಡೆಯಿಂದಲೂ ರಾಜ ಮರ್ಯಾದೆ ಸಿಗುತ್ತಿದೆ ಎಂದು ಎಂ.ಕೃಷ್ಣರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂ. ಕೃಷ್ಣಾರೆಡ್ಡಿ

ಇನ್ನು ಅನರ್ಹ ಶಾಸಕರ ಕ್ಷೇತ್ರಗಳಿಗೆ ಮುನ್ನೂರು, ನಾನೂರು ಕೋಟಿ ಅನುದಾನ ಕೊಡುತ್ತಿದ್ದಾರೆ. ಆದರೆ ನಮಗೆ ಕೊಟ್ಟಿರುವ ಅಲ್ಪ ಅನುದಾನಕ್ಕೆ ಸಿಎಂ ತಡೆ ನೀಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಪತನದ ವೇಳೆ ನನಗೆ ಮಂತ್ರಿಗಿರಿ ಆಮಿಷ ಒಡ್ಡಿದ್ರು ಎಂದು ಗಂಭೀರವಾಗಿ ಆರೋಪಿಸಿದರು.

ABOUT THE AUTHOR

...view details