ಕರ್ನಾಟಕ

karnataka

ETV Bharat / state

ವಕ್ಫ್ ಆಸ್ತಿಗಳ ರಕ್ಷಣೆ, ಅಭಿವೃದ್ಧಿಯೇ ನನ್ನ ಗುರಿ: ಇಮ್ತಿಯಾಜ್ ಪಾಷಾ

ವರ್ಕ್ಫ್ ಆಸ್ತಿಗಳ ರಕ್ಷಣೆ ನನ್ನ ಜವಾಬ್ದಾರಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಪಾಷ ಹೇಳಿದರು.

vakf
vakf

By

Published : Sep 12, 2020, 7:35 AM IST

Updated : Sep 12, 2020, 10:12 AM IST

ಚಿಂತಾಮಣಿ (ಚಿಕ್ಕಬಳ್ಳಾಪುರ):ನೂತನವಾಗಿ ನೇಮಕಗೊಂಡ ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಇಂತಿಯಾಜ್ ಪಾಷ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮುರಗಮಲ್ಲಾ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಭೇಟಿ ನೀಡಿ ವರ್ಕ್ಫ್ ಆಸ್ತಿಗಳ ರಕ್ಷಣೆ ನನ್ನ ಜವಾಬ್ದಾರಿ ಎಂದರು.

ದರ್ಗಾಗೆ ಭೇಟಿ ನೀಡಿ ನಂತರ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ದರ್ಗಾ ಆವರಣದ ಖಬರಸ್ತಾನ್ ಕಾಂಪೌಂಡ್ ಬೀಳುವ ಸ್ಥಿಯಲ್ಲಿದ್ದು, ಅದನ್ನು ಕೂಡ ದುರಸ್ತಿ ಮಾಡಬೇಕೆಂದು ವಕ್ಫ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದರ್ಗಾಗೆ ಭೇಟಿ ನೀಡಿದ ಇಮ್ತಿಯಾಜ್ ಪಾಷಾ

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ವಕ್ಫ್ ಆಸ್ತಿಗಳನ್ನು ರಕ್ಷಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗಾಗಿ ಸಲಹೆ ಸೂಚನೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ವರ್ಕ್ಫ್ ಅಧಿಕಾರಿಯಾದ ನವೀದ್ ಪಾಷಾ, ಮುಜಮಿಲ್, ಸಾಬೀರ್, ಅಮಾನುಲ್ಲಾ, ಆರೀಫ್ ಖಾನ್, ರಹಮತುಲ್ಲಾ, ನಿಮ್ಮಕಾಯಲಹಳ್ಳಿ ದರ್ಗಾ ಮುಜಾವರ್ ಮೌಲಾ ಅಲಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Last Updated : Sep 12, 2020, 10:12 AM IST

ABOUT THE AUTHOR

...view details