ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಅನಧಿಕೃತ ಮಸೀದಿ ಪರಿಶೀಲನೆ, 3 ದಿನದಲ್ಲಿ ದಾಖಲೆ ಸಲ್ಲಿಕೆಗೆ ಸೂಚನೆ - ಮಸೀದಿ ಸ್ಥಳ ಪರಿಶೀಲಿಸಿದ ನಗರಸಭೆ ಅಧ್ಯಕ್ಷ

ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಆಶ್ರಯ ಬಡಾವಣೆಯಲ್ಲಿರುವ ಅನಧಿಕೃತ ಮಸೀದಿ ನಿರ್ಮಿಸಿರುವುದು ಮಾಹಿತಿ ಬಂದಿರುವ ಹಿನ್ನೆಲೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಪರಿಶೀಲಿಸಿದರು.

Municipal Council Chairman inspects unofficial mosqueEtv Bharat
ಚಿಕ್ಕಮಗಳೂರಿನಲ್ಲಿ ಅನಧಿಕೃತ ಮಸೀದಿ ಪರಿಶೀಲಿಸಿದ ನಗರಸಭೆ ಅಧ್ಯಕ್ಷರು

By

Published : Nov 6, 2022, 3:21 PM IST

ಚಿಕ್ಕಮಗಳೂರು:ನಗರದ ಬೈಪಾಸ್ ರಸ್ತೆಯ ಆಶ್ರಯ ಬಡಾವಣೆಯಲ್ಲಿಅನಧಿಕೃತವಾಗಿ ಮಸೀದಿ ನಿರ್ಮಿಸಿರುವ ಬಗ್ಗೆ ದೂರು ಬಂದಿದ್ದು, ಇಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, "ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಮೂರು ದಿನಗಳಲ್ಲಿ ಹಾಜರುಪಡಿಸಬೇಕು. ಒಂದು ವೇಳೆ ದಾಖಲೆಗಳಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆಯಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದರು. ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಸೇರಿದಂತೆ ಮತ್ತಿತರರು ಇದ್ದರು.

ABOUT THE AUTHOR

...view details