ಚಿಂತಾಮಣಿ:ಕಳೆದ 10 ವರ್ಷಗಳಿಂದ ಪರಿಹಾರವಾಗದ ತಾಲೂಕಿನ ಆನೂರು ಗ್ರಾಮ ಪಂಚಾಯಿತಿಗೆ ಸೇರಿದ ಮೋಡಚಿಂತನಹಳ್ಳಿ ಸ್ಮಶಾನ ವಿವಾದ ಅಧಿಕಾರಿಗಳ ಹಾಗೂ ಗ್ರಾಮದ ಹಿರಿಯ ಮುಖಂಡರ ಸಹಕಾರದಿಂದ ಇಂದು ಸುಖಾಂತ್ಯಗೊಂಡಿದೆ.
ಚಿಂತಾಮಣಿ: ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿದ ದಶಕಗಳ ಸ್ಮಶಾನ ವಿವಾದ - controversy in the presence of the authorities
ತಾಲೂಕು ಭೂಮಾಪನ ಅಧಿಕಾರಿಗಳು ಸುಮಾರು ನಾಲ್ಕು ಗುಂಟೆಗಳಷ್ಟು ಜಾಗವನ್ನು ಅಳತೆ ಮಾಡಿ ನಾಲ್ಕು ಕಡೆಗಳಲ್ಲಿ ಹದ್ದುಬಸ್ತಿನ ಕಲ್ಲುಗಳನ್ನು ನೆಟ್ಟು ಸರ್ವರಿಗೂ ಸಮ್ಮತವಾಗುವ ರೀತಿಯಲ್ಲಿ ವಿವಾದವನ್ನು ಬಗೆಹರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.

ರಾಜಸ್ವ ನಿರೀಕ್ಷಕರಾದ ಅಂಬರೀಶ್, ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ತಾಲೂಕು ಭೂಮಾಪನ ಅಧಿಕಾರಿಗಳಾದ ನಾಗರಾಜ್ ವಿವಾದಿತ ಸ್ಮಶಾನ ಜಾಗಕ್ಕೆ ತೆರಳಿ ಸರ್ವೇ ಮಾಡಿದರು. ಬಳಿಕ ಸುಮಾರು ನಾಲ್ಕು ಗುಂಟೆಗಳಷ್ಟು ಜಾಗವನ್ನು ಅಳತೆ ಮಾಡಿ ನಾಲ್ಕು ಕಡೆಗಳಲ್ಲಿ ಹದ್ದುಬಸ್ತಿನ ಕಲ್ಲುಗಳನ್ನು ನೆಟ್ಟು ಸರ್ವರಿಗೂ ಸಮ್ಮತವಾಗುವ ರೀತಿಯಲ್ಲಿ ವಿವಾದವನ್ನು ಬಗೆಹರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು. ಇದಕ್ಕೆ ಗ್ರಾಮದ ಎಲ್ಲಾ ಸಮುದಾಯದ ಜನರು ಸಹಕರಿಸುವ ಮೂಲಕ ಶಾಂತಿ ಮತ್ತು ಒಗ್ಗಟ್ಟನ್ನು ಕಾಪಾಡುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷರಾದ ಪಿ ಎಂ ನರಸಿಂಹಯ್ಯ, ದಲಿತ ಮುಖಂಡ ಆನೂರು ತಿಮ್ಮಯ್ಯ, ಗ್ರಾಪಂ ಮಾಜಿ ಸದಸ್ಯರಾದ ಎಂ.ಎನ್. ಗೋಪಾಲ ಕೃಷ್ಣಪ್ಪ ಇತರರು ಇದ್ದರು.