ಕರ್ನಾಟಕ

karnataka

ETV Bharat / state

ಸುಧಾಕರ್ ದೇಶದಲ್ಲೇ ಬಹುದೊಡ್ಡ ಭ್ರಷ್ಟ ರಾಜಕಾರಣಿ: ಡಿ.ಆರ್​.ನಾರಾಯಣಸ್ವಾಮಿ ಆರೋಪ - sudhakar most corrupt politician in the country: DR Narayaswamy

ದೇಶದಲ್ಲೇ ಬಹುದೊಡ್ಡ ಭ್ರಷ್ಟ ರಾಜಕಾರಣಿ ಅನರ್ಹ ಶಾಸಕ ಸುಧಾಕರ್ ಎಂದು ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಹೇಳಿದ್ದಾರೆ.

The candidate of the Bahujan Samaj Party is DR Narayaswamy
ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿ.ಆರ್.ನಾರಾಯಸ್ವಾಮಿ

By

Published : Nov 27, 2019, 8:35 AM IST

ಚಿಕ್ಕಬಳ್ಳಾಪುರ:ದೇಶದಲ್ಲೇ ಬಹುದೊಡ್ಡ ಭ್ರಷ್ಟ ರಾಜಕಾರಣಿ ಅನರ್ಹ ಶಾಸಕ ಸುಧಾಕರ್ ಎಂದು ಬಹುಜನ ಸಮಾಜವಾದಿ ಪಕ್ಷ ಪಕ್ಷದ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಹೇಳಿದ್ದಾರೆ.

ಅನರ್ಹ ಶಾಸಕ ಸುಧಾಕರ್ ದೇಶದಲ್ಲೇ ಬಹುದೊಡ್ಡ ಭ್ರಷ್ಟ ರಾಜಕಾರಣಿ: ಡಿ.ಆರ್​.ನಾರಾಯಣಸ್ವಾಮಿ

ಚಿಕ್ಕಬಳ್ಳಾಪುರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಕ್ಷೇತ್ರದ ಜನ‌ತೆ ಬಹಳಷ್ಟು ಬೆಂಬಲವನ್ನು ನೀಡುತ್ತಿದ್ದಾರೆ. ಶಾಸಕರಾಗಲು ಆರ್ಶೀವಾದ ಮಾಡುತ್ತಿದ್ದಾರೆ. ಆಂಜಿನಪ್ಪ,ಸುಧಾಕರ್ ಅವರನ್ನು ಕ್ಷೇತ್ರದ ಜನ ನೋಡಿದ್ದಾರೆ. ಇನ್ನು ಜೆಡಿಎಸ್ ನ ರಾಧಾಕೃಷ್ಣ, ದೇವೇಗೌಡರ ಸ್ವಂತ ಸಂಬಂಧಿ. ಕುಟುಂಬ ರಾಜಕಾರಣಕ್ಕೆ ಇದಕ್ಕಿಂತ ಸಾಕ್ಷಿ ಬೇರೆ ಇಲ್ಲ. ಜೆಡಿಎಸ್ ಕಾಂಗ್ರೆಸ್ ಒಂದೇ ಪಕ್ಷವಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಒಂದೇ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ ಅವರು ಯಾವ ಪಕ್ಷದ ಪರವಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂಬ ಗೊಂದಲವಿದೆ.

ಮೂರು ಪಕ್ಷಗಳ ಅಭ್ಯರ್ಥಿಗಳಿಗೆ ನಮ್ಮ ಪಕ್ಷದಿಂದ ಪ್ರಬಲ ಪೈಪೋಟಿ ಇದೆ ಎಂದು ಹೇಳಿಕೆಗಳು ಕೇಳಿ ಬರುತ್ತಿವೆ. ಆದರೆ, ಆನೆ ಪಕ್ಷಕ್ಕೆ ಯಾರೂ ಪೈಪೋಟಿ ನೀಡಲು ಸಾಧ್ಯವಿಲ್ಲ. ಮೂರು ಪಕ್ಷಗಳ ಗೊಂದಲದಿಂದ ಕ್ಷೇತ್ರದ ಜನತೆ ಬಿಎಸ್​ಪಿ ಪಕ್ಷಕ್ಕೆ ಮತವನ್ನು ನೀಡಲಿದ್ದು, 20 ಸಾವಿರ ಬಹುಮತಗಳಿಂದ ಬಹುಜನ ಸಮಾಜವಾದಿ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details