ಕರ್ನಾಟಕ

karnataka

ETV Bharat / state

ಸರ್ಕಾರಿ ಕಚೇರಿ, ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸ್ಯಾನಿಟೈಸರ್​​​ ಇಡಲಾಗಿದೆ: ಶೋಭಾ ಕರಂದ್ಲಾಜೆ

ರಾಜ್ಯದಲ್ಲಿ ಕೊರೊನಾ ವೈರಸ್ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಕಚೇರಿ ಮುಂಭಾಗ ಮತ್ತು ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಕೈ ತೊಳೆಯಲು ಸ್ಯಾನಿಟೈಸರ್​​ ವ್ಯವಸ್ಥೆ ಮಾಡಲಾಗಿದೆ.

sanitizer-kept-in-government-office-in-chikkamagalore
ಶೋಭಾ ಕರಂದ್ಲಾಜೆ

By

Published : Mar 21, 2020, 6:00 PM IST

ಚಿಕ್ಕಮಗಳೂರು: ಕೊರೊನಾ ವೈರಸ್​ ತಡೆಗಟ್ಟುವ ದೃಷ್ಟಿಯಿಂದ ಸರ್ಕಾರಿ ಕಚೇರಿ ಮುಂಭಾಗ ಮತ್ತು ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕೊರೊನಾ ವೈರಸ್​ ದಾಳಿಯಿಂದ ಚೀನಾದಲ್ಲಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಭಾರತದಲ್ಲಿ ವಿವಿಧ ದೇಶಗಳಿಂದ ಬಂದು ಹೋಗಿರುವ ಜನರಿಂದ ವೈರಸ್​ ಹರಡಿರುವ ಸಾಧ್ಯತೆ ಇದೆ. ವೈರಸ್​ ಸಂಪೂರ್ಣ ತಡೆಗೆ ಜನರು ಕ್ರಮ ಕೈಗೊಳ್ಳಬೇಕು. ಅಲ್ಲದೆ ಪ್ರಧಾನಿ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂನಲ್ಲಿ ಎಲ್ಲರೂ ಭಾಗವಹಿಸಿಬೇಕು ಎಂದು ವಿನಂತಿಸಿದರು.

ಕೊರೊನಾ ಮುಂಜಾಗ್ರತೆ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಜಿಲ್ಲೆಯಲ್ಲಿ ಈಗಾಗಲೇ 248 ಜನರ ಪರೀಕ್ಷೆ ಮಾಡಲಾಗಿದೆ. ವಿದೇಶದಿಂದ ಜಿಲ್ಲೆಗೆ ಬಂದಿದ್ದ ನಾಲ್ಕು ಜನರನ್ನು ಈಗಾಗಲೇ ತಪಾಸಣೆ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ. ಜಿಲ್ಲಾಡಳಿತ ಈ ವೈರಸ್ ತಡೆಗಟ್ಟಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. ರಾಜ್ಯ ಸರ್ಕಾರ ಈ ವೈರಸ್ ತಡೆಗಟ್ಟಲು ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ತಿಳಿಸಿದರು.

ABOUT THE AUTHOR

...view details