ಚಿಕ್ಕಬಳ್ಳಾಪುರ: ಸಿಮೆಂಟ್ ಲಾರಿ ಹಾಗೂ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಏಳು ಜನ ಪ್ರಯಾಣಿಕರು ಮೃತಪಟ್ಟಿದ್ದು, ಈ ದುರ್ಘಟನೆಗೆ ಆರ್‌ಟಿಓ ಅಧಿಕಾರಿಗಳು ಕೂಡ ಹೊಣೆಯಾಗಲಿದ್ದಾರೆ ಎಂದು ಸ್ಥಳೀಯ ಶಾಸಕ ಎಂ ಕೃಷ್ಣಾರೆಡ್ಡಿ ಹೇಳಿದ್ದಾರೆ.
ಶಾಸಕ ಕೃಷ್ಣಾರೆಡ್ಡಿ ಸ್ಥಳಕ್ಕೆ ಭೇಟಿ ರಾಯಲ್ಪಾಡು ಕಡೆಯಿಂದ ಬರುತ್ತಿದ್ದ ಜೀಪ್ ವಾಹನಕ್ಕೆ ಮಾಡಿಕೆರೆ ಕ್ರಾಸ್ ಬಳಿಯ ನಲಮಾಚನಹಳ್ಳಿ ಬಳಿ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ ಜೀಪ್‌ನಲ್ಲಿ 16-17 ಪ್ರಯಾಣಿಕರಿದ್ದರು ಎಂದು ಕೃಷ್ಣಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಲಾರಿ- ಜೀಪ್ ನಡುವೆ ಭೀಕರ ಅಪಘಾತ, 7 ಸಾವು, ಐವರು ಗಂಭೀರ
ಆರ್‌ಟಿಓ ಅಧಿಕಾರಿಗಳು ಸಂಪರ್ಕಕಕ್ಕೆ ಸಿಗುತ್ತಿಲ್ಲ. ಘಟನೆಯ ಬಗ್ಗೆ ಗ್ರಾಮಾಂತರ ಠಾಣೆ ಇನ್ಸಪೆಕ್ಟರ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಮೂರು ಆ್ಯಂಬುಲೆನ್ಸ್ಗಳಲ್ಲಿ ಗಾಯಳುಗಳನ್ನು ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದ್ದು, ಜೀರೋ ಟ್ರಾಫಿಕ್ ಮೂಲಕ ಆಸ್ಪತ್ರೆಗೆ ಹೋಗಲು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ:ಅಪಘಾತದಲ್ಲಿ 7 ಸಾವು: ಸ್ಥಳಕ್ಕೆ ಧಾವಿಸಿ ಮಾನವೀಯತೆ ಮೆರೆದ ಶಾಸಕ ನಂಜೇಗೌಡ
ಮೃತರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು ಜೀಪ್‌ನಲ್ಲಿ 16-17 ಪ್ರಯಾಣಿಕರಿಗೆ ಪರವಾನಗಿ ಕೊಟ್ಟವರು ಯಾರು ಎಂದು ತಿಳಿಯಬೇಕಿದೆ. ವಾಹನಕ್ಕೆ ಪರವಾನಗಿ ಇಲ್ಲವಾದ್ರೆ ಸಾವಿಗೆ ನೇರವಾಗಿ ಆರ್‌ಟಿಓ ಅಧಿಕಾರಿಗಳು ಹೊಣೆಯಾಗುತ್ತಾರೆ. ಆರ್‌ಟಿಓ ಅಧಿಕಾರಿಗಳ ನಂಬರ್ ಸ್ವಿಚ್ ಆಫ್ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.