ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಜತೆ ಹೊಂದಾಣಿಕೆ ಎಂದು ಆರೋಪಿಸಿದರೆ ತಲೆ, ಕೈಕಾಲು ತೆಗೆಯುತ್ತೇನೆ: ರವಿನಾರಾಯಣರೆಡ್ಡಿ ಖಡಕ್ ವಾರ್ನಿಂಗ್​​

ನನ್ನ ಮೇಲೆ ಆರೋಪ ಮಾಡಿದರೆ ಪರಿಣಾಮ ಎದುರಿಸಲು ಸಿದ್ದರಾಗಿ. ಈಗ ನಾನು ರಾಜಕೀಯವಾಗಿ ಸೌಮ್ಯವಾಗಿ ಇದ್ದೀನಿ. ಮತ್ತೆ ಕಾಂಗ್ರೆಸ್ ಜತೆ ಹೊಂದಾಣಿಕೆ ಎಂದು ಆರೋಪ ಮಾಡಿ ಕೆಣಕಿದರೆ ವಿರೋಧಿಗಳ ತಲೆ ಕೈಕಾಲು ತೆಗೆಯಲು ಹಿಂಜರಿಯುವುದಿಲ್ಲ ಎಂದು ರವಿನಾರಾಯಣರೆಡ್ಡಿ ಖಡಕ್ ಎಚ್ಚರಿಕೆ ನೀಡಿದರು.

BJP Leader Ravi narayana Reddy
ಬಿಜೆಪಿ ಮುಖಂಡ ಎನ್.ಎಂ ರವಿನಾರಾಯಣರೆಡ್ಡಿ

By

Published : Jan 29, 2022, 7:21 AM IST

ಗೌರಿಬಿದನೂರು(ಚಿಕ್ಕಬಳ್ಳಾಪುರ):ಕಾಂಗ್ರೆಸ್ ಪಕ್ಷದೊಂದಿಗೆ ನಾನು ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ವಿನಾಕಾರಣ ನನ್ನ ಮೇಲೆ ಆರೋಪ ಮಾಡಿದರೆ ತಲೆ, ಕೈಕಾಲು ತೆಗೆಯಲು ನಾನು ಹಿಂಜರಿಯುವುದಿಲ್ಲ ಎಂದು ಬಿಜೆಪಿ ಮುಖಂಡ ಎನ್.ಎಂ ರವಿನಾರಾಯಣರೆಡ್ಡಿ ಖಡಕ್ ವಾರ್ನಿಂಗ್​​ ನೀಡಿದ್ದಾರೆ.

ಕಾಂಗ್ರೆಸ್ ಜತೆ ಹೊಂದಾಣಿಕೆ ವಿಚಾರ ಎನ್.ಎಂ ರವಿನಾರಾಯಣರೆಡ್ಡಿ ಪ್ರತಿಕ್ರಿಯೆ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಗೌರಿಬಿದನೂರಿನ ಕಾಂಗ್ರೆಸ್ ಪಕ್ಷದ ಶಾಸಕ ಎನ್.ಹೆಚ್.ಶಿವಶಂಕರೆಡ್ಡಿ ಕುಟುಂಬ ನಮಗೆ ಸ್ವಾತಂತ್ರ್ಯ ಪೂರ್ವದಿಂದಲೂ ಬದ್ದ ಶತ್ರು. ಅಂತಹದರಲ್ಲಿ ರಾಜಕೀಯವಾಗಿ ಅವರೊಂದಿಗೆ ಹೊಂದಾಣಿಕೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಇನ್ನು ಕೆಹೆಚ್‌ಪಿ ಬಣದ ಕಾಂತರಾಜು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣದಲ್ಲಿ(ದೌರ್ಜನ್ಯ ನಿಗ್ರಹ ಕಾಯ್ದೆ) ಜೈಲಿಗೆ ಹೋಗಬೇಕಾಗಿತ್ತು. ಅರ್ಧ ರಾತ್ರಿಯಲ್ಲಿ ನನ್ನ ಮನೆ ಬಾಗಿಲಿಗೆ ಬಂದು ಸಹಾಯ ಪಡೆದು, ಈಗ ನನ್ನ ಮೇಲೆ ಕಾಂಗ್ರೆಸ್ ಪಕ್ಷದೊಂದಿಗೆ ರವಿನಾರಾಯಣರೆಡ್ಡಿ ಹೊಂದಾಣಿಕೆ ಆರೋಪ ಮಾಡುವುದು ಸರಿಯೇ?. ಅವರಿಗೆ ನನ್ನ ಪ್ರಶ್ನೆ ಮಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ:'ಹೆತ್ತ ತಾಯಿಯನ್ನೇ ಬೀದಿಪಾಲು ಮಾಡಿದ ಕ್ರೂರಿ' ನವಜೋತ್ ಸಿಂಗ್​ ಮೇಲೆ ಸಹೋದರಿ ಆರೋಪ

ABOUT THE AUTHOR

...view details