ಕರ್ನಾಟಕ

karnataka

ETV Bharat / state

ಪೊರಕೆ ಹಿಡಿದು ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿದ ಸಂಸದರು - hospitalized with broom

ವೈಟ್ ಶರ್ಟ್ ಧರಿಸಿ, ಸೂಟು ಬೂಟು ಹಾಕಿಕೊಂಡು ಕಾರ್ಯಕ್ರಮಕ್ಕೆ ಹಾಜರಾಗಿದ್ದ ಸಂಸದ ಮುನಿಸ್ವಾಮಿ ಕಾರ್ಯಕ್ರಮದ ಬಳಿಕ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ಕೈಗೊಂಡರು.

ಪೊರಕೆ ಹಿಡಿದು ಆಸ್ಪತ್ರೆ ಕ್ಲೀನ್ ಮಾಡಿದ ಸಂಸದ ಮುನಿಸ್ವಾಮಿ..

By

Published : Sep 17, 2019, 5:00 AM IST

ಚಿಕ್ಕಬಳ್ಳಾಪುರ: ‌ ವೈಟ್ ಶರ್ಟ್ ಧರಿಸಿ, ಸೂಟು ಬೂಟು ಹಾಕಿಕೊಂಡು ಕಾರ್ಯಕ್ರಮಕ್ಕೆ ಹಾಜರಾದ ಸಂಸದರು, ಕಾರ್ಯಕ್ರಮದ ನಂತರ ಪೊರಕೆಯನ್ನು ಹಿಡಿದು ಆವರಣವನ್ನು ಸ್ವಚ್ಛಗೊಳಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆಯಿತು.

ಕೋಲಾರ ಲೋಕಸಭಾ ಕ್ಷೇತ್ರದ ಚಿಂತಾಮಣಿ‌ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹುಟ್ಟುಹಬ್ಬದ ಸಲುವಾಗಿ ರಕ್ತದಾನ‌ ಶಿಬಿರ ನಡೆಯಿತು. ಕ್ಷೇತ್ರದ ಸಂಸದ ಎಸ್. ಮುನಿಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪೊರಕೆ ಹಿಡಿದು ಆಸ್ಪತ್ರೆ ಕ್ಲೀನ್ ಮಾಡಿದ ಸಂಸದ ಮುನಿಸ್ವಾಮಿ

ಕಾರ್ಯಕ್ರಮದ ಉದ್ಘಾಟನೆಯ ನಂತರ ನಗರದ ಮಹಿಳಾ ಕಾಲೇಜು ಸೇರಿದಂತೆ ಸರ್ಕಾರಿ ಆಸ್ಪತ್ರೆಯ ಬಳಿ ಅವರು ಪೊರಕೆ ಹಿಡಿದು ಕಸಕಡ್ಡಿ, ಪೇಪರ್​ಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಕಾರ್ಯಕರ್ತರಿಗೆ ಸ್ವಚ್ಚ ಮಾಡಲು ಸೂಚನೆ ನೀಡಿ ಎಲ್ಲರ ಜೊತೆ ಕೈಜೊಡಿಸಿ ಎಲ್ಲರನ್ನು ಬೆರುಗುಗೊಳಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಜನಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಬೇಕೆಂದು ಕೇಂದ್ರದಿಂದ ಮತ್ತು ರಾಜ್ಯದಿಂದ ಆದೇಶವಿದೆ. ಈ ನಿಟ್ಟಿನಲ್ಲಿ ಶ್ರಮದಾನ ಮಾಡಿದ್ದೇವೆ. ಹಾಗೂ ಮೋದಿ ಹುಟ್ಟಿದ ದಿನದ ಸಂದರ್ಭದಲ್ಲಿ ಸೇವಾ ದಿವಸ ಹಾಗೂ ಸ್ವಚ್ಛತಾ ಅಭಿಯಾನವನ್ನು ಘೋಷಿಸಿದ್ದಾರೆ. ತಮ್ಮನ್ನು ತಾವೇ ಪ್ರಧಾನ ಸೇವಕ ಎಂದು ಘೋಷಿಸಿಕೊಂಡಿರುವ ವ್ಯಕ್ತಿ ಮೋದಿಯಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಬ್ಯಾಲಹಳ್ಳಿ ಆಂಜನೇಯ ರೆಡ್ಡಿ, ಸಮಾಜಸೇವಕರಾದ ಅರುಣ್ ಬಾಬು, ಶಿವಣ್ಣ, ಮಾಡಿಕೆರೆ ಅರುಣ್ ಕುಮಾರ್ಸೇ ರಿದಂತೆ ಬಿಜೆಪಿ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ABOUT THE AUTHOR

...view details