ಕರ್ನಾಟಕ

karnataka

ETV Bharat / state

ಖಾರದ ಪುಡಿ ಎರಚಿ ದರೋಡೆಗೆ ಯತ್ನಿಸುತ್ತಿದ್ದ ಆರೋಪಿಗಳು ಅಂದರ್...! - ಬೆಂಗಳೂರು ಗ್ರಾಮಾಂತರ

ದರೋಡೆಗೆ ಸಂಚು ರೂಪಿಸಿದ 6 ಜನ ದರೋಡೆಕೋರರನ್ನು ಬಂಧಿಸಿ, ದರೋಡೆಗೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಾರದ ಪುಡಿ ಎರಚಿ ದರೋಡೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳ ಬಂಧನ

By

Published : Sep 21, 2019, 3:09 AM IST

Updated : Sep 21, 2019, 11:17 AM IST

ಚಿಕ್ಕಬಳ್ಳಾಪುರ:ರಾತ್ರಿ ವೇಳೆ ಖಾರದ ಪುಡಿ ಎರಚಿ ದರೋಡೆಗೆ ಸಂಚು ರೂಪಿಸುತ್ತಿದ್ದ ರೈಸ್ ಪುಲ್ಲಿಂಗ್ ಚೊಂಬು ಗ್ಯಾಂಗ್​ನ 6 ದರೋಡೆಕೋರರನ್ನು ಪೊಲೀಸರು ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿಯಲ್ಲಿ ಬಂಧಿಸಿದ್ದಾರೆ.

ತಮಿಳುನಾಡಿನ ಕೊಯಂಬತ್ತೂರಿನ ಆನಂದ್ ನಾಯ್ಡು(57), ಹೊಸಬಿನ್ನಿ ಬಡಾವಣೆಯ ಪುಟ್ಟಸ್ವಾಮಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮರಸನಹಳ್ಳಿ ನಾಗೇಂದ್ರ(38), ತುಮಕೂರು ತಾಲೂಕಿನ ಗುಬ್ಬಿಯ ಹೇರೂರು ರಮೇಶ್(32), ಚಿಂತಾಮಣಿ ತಾಲೂಕಿನ ಮರವನಪಲ್ಲಿ ನಾಗೇಂದ್ರ (37), ಬೆಂಗಳೂರು ಗ್ರಾಮಾಂತರ ನೆಲಮಂಗಲದ ಅರಿಶಿನಕುಂಟೆ ನರಸಿಂಹಮೂರ್ತಿ(53) ಬಂಧಿತ ಆರೋಪಿಗಳಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಕೆಂಚಾರ್ಲಹಳ್ಳಿ ಠಾಣೆಯ ಪಿಎಸ್ಐ ಪಿವಿ ರೆಡ್ಡಿ ಮತ್ತು ತಂಡ ದರೋಡೆಗೆ ಸಂಚು ರೂಪಿಸಿದ 6 ಜನ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದರೋಡೆಕೋರರ ಬಳಿಯಿದ್ದ ತಾಮ್ರದ ಚೊಂಬುಗಳು, ಎರಡು ಕಾರು, 4 ದ್ವಿಚಕ್ರವಾಹನಗಳು,10 ಮೊಬೈಲ್ ಫೋನ್, ಖಾರದ ಪುಡಿ, ರಾಡ್, ದೊಣ್ಣೆ ಸೇರಿದಂತೆ ₹30,030 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

Last Updated : Sep 21, 2019, 11:17 AM IST

ABOUT THE AUTHOR

...view details