ಚಿಕ್ಕಬಳ್ಳಾಪುರ:ಅವರಿಬ್ಬರು ಚಿಕ್ಕವಯಸ್ಸಿನಿಂದ ಸ್ನೇಹಿತರಂತೆ. ಬೆಳೆಯುತ್ತಾ ಪ್ರೀತಿ-ಪ್ರೇಮ ಪ್ರಣಯ ಶುರು ಮಾಡಿದ್ದಾರೆ. ಪೋಷಕರ ವಿರೋಧದ ನಡುವೆ ಶುಕ್ರವಾರ ಬೆಳಗ್ಗೆ ದೇವಸ್ಥಾನವೊಂದರಲ್ಲಿ ಮದುವೆಯೂ ಆಗಿದ್ದರು. ಭದ್ರತೆಯ ನೆಪದಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ಕಾರಿನಲ್ಲಿದ್ದ ನವವಿವಾಹಿತೆಯನ್ನು ಪೋಷಕರು ಎಳೆದುಕೊಂಡು ಹೋಗಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆಯಿತು.
ಸುದ್ದಿಯ ವಿವರ: ಹುಡುಗಿಯ ಹೆಸರು ನಯನಾ. ಬಿಎಸ್ಸಿ ಪದವಿ ಓದುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ನಿವಾಸಿ. ಹುಡುಗನ ವಯಸ್ಸು 22. ಹೆಸರು ರಾಮು. ಚಿಕ್ಕಬಳ್ಳಾಪುರ ನಗರದ ಟೌನ್ ಹಾಲಗ್ ನಿವಾಸಿ. ಇಬ್ಬರೂ ಪ್ರೌಢ ಶಾಲೆಯಿಂದಲೇ ಸ್ನೇಹಿತರಂತೆ. ಕಾಲೇಜಿನಿಂದಲೇ ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ.