ಚಿಕ್ಕಬಳ್ಳಾಪುರ:ಅರಣ್ಯ ಇಲಾಖೆಯ ಪರವಾನಗಿ ಇಲ್ಲದೆ ಅಧಿಕಾರಿಗಳು ಮರ ಕಡಿಯಲು ಮುಂದಾಗಿದ್ದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಪರವಾನಗಿ ಇಲ್ಲದೆ ಬೃಹತ್ ಬೇವಿನ ಮರ ಕಡಿಯಲು ಮುಂದಾಗಿದ್ದ ಅಧಿಕಾರಿ
ಬೇವಿನ ಮರವೊಂದನ್ನು ಯಾವುದೇ ಮಾಹಿತಿ ಇಲ್ಲದೆ ಕಟ್ಟಡ ನಿರ್ಮಾಣಕ್ಕಾಗಿ ಇಂಜಿನಿಯರ್ವೊಬ್ಬರು ಅರಣ್ಯಾಧಿಕಾರಿಗಳಿಂದ ಪರವಾನಗಿ ಪಡೆಯದೆ ಕಡಿಸಲು ಮುಂದಾಗಿದ್ದರು ಎನ್ನಲಾಗಿದ್ದು, ಇದನ್ನು ತಡೆಯುವಲ್ಲಿ ಪರಿಸರಪ್ರೇಮಿಯೊಬ್ಬರು ಯಶಸ್ವಿಯಾಗಿದ್ದಾರೆ.
ಬೇವಿನ ಮರ
ನಗರದ ಲೈಬ್ರರಿ ಆವರಣದಲ್ಲಿರುವ ಬೇವಿನ ಮರವೊಂದನ್ನು ಯಾವುದೇ ಮಾಹಿತಿ ಇಲ್ಲದೆ ಕಟ್ಟಡ ನಿರ್ಮಾಣಕ್ಕಾಗಿ ಇಂಜಿನಿಯರ್ವೊಬ್ಬರು ಅರಣ್ಯಾಧಿಕಾರಿಗಳಿಂದ ಪರವಾನಗಿ ಪಡೆಯದೆ ಕಡಿಸಲು ಮುಂದಾಗಿದ್ದರು ಎನ್ನಲಾಗಿದೆ.
ಈ ವೇಳೆ ಪರಿಸರ ಪ್ರೇಮಿ ಶಿವಕುಮಾರ್ ಎಂಬುವವರು ಪ್ರಶ್ನಿಸಿ ಅಡ್ಡಪಡಿಸಿ ಮರವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ದೇಶವೇ ಕೊರೊನಾ ಹಾವಳಿಯಿಂದ ನಲುಗಿದೆ. ಇನ್ನು ಇದ್ದ ಮರಗಳನ್ನೂ ಕಡಿದು ಪ್ರಕೃತಿ ನಾಶ ಮಾಡಿದ್ರೆ ಹೇಗೆ ಎಂದು ಪರಿಸರ ಪ್ರೇಮಿ ಬೇಸರ ವ್ಯಕ್ತಪಡಿಸಿದ್ದಾರೆ.