ಕರ್ನಾಟಕ

karnataka

ETV Bharat / state

ಪ್ರಾಣಕ್ಕೆ ಬೆಲೆನೇ ಇಲ್ಲ ಸಾರ್​​​..ಬೆಡ್​ ಸಿಗದೇ ಮೃತಪಟ್ಟ ನಾನ್​​ ಕೋವಿಡ್ ರೋಗಿ ಕುಟುಂಬಸ್ಥರ ಆಕ್ರೋಶ

ಉಸಿರಾಟದ ತೊಂದರೆಯಿಂದ ಬಳಲುತಿದ್ದ ವ್ಯಕ್ತಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೂ ಭೇಟಿ ನೀಡಿ ಚಿಕಿತ್ಸೆಗೆಂದು ಪರದಾಡಿದ್ದು. ನಂತರ ಜಿಲ್ಲಾಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದು, ಅಲ್ಲಿಯೂ ಸಹ ಬೆಡ್ ಖಾಲಿ ಇಲ್ಲ, ನೀವು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದರು.

non-coivd-patient-died-lack-of-bed-facilities-in-chikkaballapura
.ಬೆಡ್​ ಸಿಗದೆ ನಾನ್​​ ಕೋವಿಡ್ ರೋಗಿ ಸಾವು

By

Published : May 1, 2021, 4:07 PM IST

ಚಿಕ್ಕಬಳ್ಳಾಪುರ:ಆಸ್ಪತ್ರೆಯಲ್ಲಿ ಬೆಡ್ ಸಿಗದೆ ನಾನ್ ಕೋವಿಡ್ ರೋಗಿಯೊಬ್ಬರು ಸಾವನ್ನಪ್ಪಿದ ಘಟನೆ ಆರೋಗ್ಯ ಸಚಿವರ ತವರು ಜಿಲ್ಲೆಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ತಾಲೂಕಿನ ಮುತ್ತಕದಹಳ್ಳಿ ಗ್ರಾಮದ ನಿವಾಸಿ ಮುನಿಶ್ವಾಮಿ ಗೌಡ ಸಾವನ್ನಪ್ಪಿದ ದುರ್ದೈವಿ ಎಂದು ತಿಳಿದು ಬಂದಿದೆ. ಉಸಿರಾಟದ ತೊಂದರೆಯಿಂದ ಬಳಲುತಿದ್ದ ವ್ಯಕ್ತಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೂ ಭೇಟಿ ನೀಡಿ ಚಿಕಿತ್ಸೆಗೆಂದು ಪರದಾಡಿದ್ದು. ನಂತರ ಜಿಲ್ಲಾಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಆದರೆ, ಅಲ್ಲಿಯೂ ಸಹ ಬೆಡ್ ಖಾಲಿ ಇಲ್ಲ, ನೀವು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಬೆಡ್​ ಸಿಗದೆ ಮೃತಪಟ್ಟ ನಾನ್​​ ಕೋವಿಡ್ ರೋಗಿ ಕುಟುಂಬಸ್ಥರ ಆಕ್ರೋಶ

ಅದರಂತೆ ಚಿಂತಾಮಣಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ವೇಳೆ, ಸರಿಯಾದ ಚಿಕಿತ್ಸೆ ಸಿಗದೇ ಸಾವನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿ, ಆಸ್ಪತ್ರೆ ಮುಂಭಾಗ ಕಣ್ಣೀರಿಟ್ಟಿದ್ದಾರೆ.

ABOUT THE AUTHOR

...view details