ಕರ್ನಾಟಕ

karnataka

ETV Bharat / state

‘ನಾಚಿಕೆ ಆಗಲ್ವಾ ನಿಮ್ಗೆ’: ದಂಡ ವಸೂಲಿ ಮಾಡ್ತಿದ್ದ ಪೊಲೀಸರ ವಿರುದ್ಧ ರಮೇಶ್ ಕುಮಾರ್ ಗರಂ

ನಡುರಸ್ತೆಯಲ್ಲಿ ರಸ್ತೆಯಲ್ಲಿ ವಾಹನಗಳ ದಾಖಲೆ ಪರಿಶೀಲನೆಗೆ ನಿಂತಿದ್ದ ಪೊಲೀಸರ ವಿರುದ್ಧ ಶಾಸಕ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಲ್ಲದೆ, ತರಾಟೆಗೆ ತೆಗೆದುಕೊಂಡಿದ್ದಾರೆ. ನೀವೇನು ದಾಖಲೆ ಪರಿಶೀಲಿಸುತ್ತೀರಿ ಎಂದು ಅಲ್ಲಿಂದ ಹೋಗುವಂತೆ ಸೂಚಿಸಿದ್ದಾರೆ.

mla-ramesh-kumar-burst-out-on-police-officers-at-highway
ವಾಹನ ದಾಖಲೆ ಪರಿಶೀಲನೆಗೆ ನಿಂತಿದ್ದ ಪೊಲೀಸರ ವಿರುದ್ಧ ರಮೇಶ್ ಕುಮಾರ್ ಗರಂ

By

Published : Aug 28, 2021, 3:47 PM IST

ಚಿಕ್ಕಬಳ್ಳಾಪುರ: ನಡುರಸ್ತೆಯಲ್ಲಿ ನಿಂತು ವಾಹನಗಳ ತಡೆದು ದಂಡ ವಸೂಲಿ ಮಾಡುತ್ತಿದ್ದ ಚಿಂತಾಮಣಿ ನಗರ ಠಾಣಾ ಪೊಲೀಸರ ವಿರುದ್ಧ ಮಾಜಿ ಸ್ಪೀಕರ್​​ ರಮೇಶ್ ಕುಮಾರ್ ಕೆಂಡಾಮಂಡಲವಾದ ಘಟನೆ ನಡೆದಿದೆ.

ವಾಹನ ದಾಖಲೆ ಪರಿಶೀಲನೆಗೆ ನಿಂತಿದ್ದ ಪೊಲೀಸರ ವಿರುದ್ಧ ರಮೇಶ್ ಕುಮಾರ್ ಗರಂ

ಚಿಂತಾಮಣಿ ತಾಲೂಕಿನ ಐಮರೆಡ್ಡಹಳ್ಳಿ ಬಳಿ ಪೊಲೀಸರು ರಸ್ತೆಯಲ್ಲಿ ವಾಹನಗಳನ್ನ ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ವೇಳೆ ಶ್ರೀನಿವಾಸಪುರ ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಣಿಸುತ್ತಿದ್ದ ಶಾಸಕ ರಮೇಶ್ ಕುಮಾರ್ ಪೊಲೀಸರ ಕಾರು ಕಂಡು ನಿಲ್ಲಿಸಿದ್ದಾರೆ. ಬಳಿಕ ಕೆಳಗಿಳಿದು ಬಂದು ಅವರ ಬೆವರಿಳಿಸಿದ್ದಾರೆ.

ಕಳೆದ ದಿನಗಳ ಹಿಂದೆ ಸಚಿವರೇ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಬಾರದೆಂದು ಸೂಚಿಸಿದ್ದರು. ಆದರೆ ನೀವು ಏನು ಮಾಡುತ್ತಿದ್ದೀರಿ..? ಈ ರೀತಿ ಆದರೆ 'ನಿಮ್ಮ ಮಕ್ಕಳು ಬದುಕುವುದಾದರು ಹೇಗೆ ಎಂದು ಪ್ರಶ್ನಿಸಿದ್ದಾರೆ. ಮೊದಲು ಇಲ್ಲಿಂದ ಹೊರಡಿ, ನಾಚಿಕೆ ಆಗಲ್ವಾ ನಿಮ್ಗೆ' ಎಂದು ಕಿಡಿಕಾರಿದ್ದಾರೆ.

ಓದಿ:ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಪೊಲೀಸ್ ಇಲಾಖೆ ಒಳ್ಳೆಯ ಮೆಸೇಜ್ ಪಾಸ್ ಮಾಡಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details