ಚಿಕ್ಕಬಳ್ಳಾಪುರ: ರಾಜ್ಯದಲ್ಲೆ ಮೊದಲ ಬಾರಿಗೆ ಗಣಿತಶಾಸ್ತ್ರ ಮತ್ತು ಆಂಗ್ಲ ಭಾಷಾ ಪ್ರಯೋಗಾಲಯವನ್ನು ಜಿಲ್ಲೆಯ ಚಿಂತಾಮಣಿ ನಗರದ ಮಹಿಳಾ ಕಾಲೇಜಿನಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, ಶಾಸಕ ಎಂ ಕೃಷ್ಣಾರೆಡ್ಡಿ ಇಂದು ಉದ್ಘಾಟನೆ ಮಾಡಿದರು.
ಗಣಿತ ಶಾಸ್ತ್ರ, ಲ್ಯಾಬ್ ಉದ್ಘಾಟನೆ ಮಾಡಿದ ಶಾಸಕ ಕೃಷ್ಣಾರೆಡ್ಡಿ
ಗಣಿತಶಾಸ್ತ್ರ ಮತ್ತು ಆಂಗ್ಲ ಭಾಷಾ ಪ್ರಯೋಗಾಲಯವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಚಿಂತಾಮಣಿ ನಗರದ ಮಹಿಳಾ ಕಾಲೇಜಿನಲ್ಲಿ ಅನುಷ್ಠಾನಕ್ಕೆ ತರಲಾಗಿದೆ.
ರೊಸಾ ಗಣಿತ ಶಾಸ್ತ್ರ, ಲ್ಯಾಬ್ ಉದ್ಘಾಟನೆ ಮಾಡಿದ ಶಾಸಕ ಕೃಷ್ಣಾರೆಡ್ಡಿ
ನಂತರ ಮಾತನಾಡಿದ ಶಾಸಕರು, ಇಂಗ್ಲಿಷ್ ಭಾಷೆಯ ಜ್ಞಾನ ಇತರೆ ಉದ್ಯೋಗ ಅವಕಾಶಗಳು ಹೆಚ್ಚಾಗಿ ದೊರೆಯುತ್ತದೆ. ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳ ಜೊತೆಗೆ ನಮ್ಮ ನಾಡಿನ ಭಾಷೆಯ ಜೊತೆಗೆ ಆಂಗ್ಲ ಭಾಷೆಯ ಕಡೆ ಹೆಚ್ಚು ಆಸಕ್ತಿ ತೋರಬೇಕು. ರಾಜ್ಯದಲ್ಲಿ ಅತ್ಯುತ್ತಮವಾದ ಲ್ಯಾಬ್ ಕಾಲೇಜಿನಲ್ಲಿ ಸ್ಥಾಪನೆ ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶಿವಶಂಕರ್ ,ಶಿಕ್ಷಕ ಡಾ ಎಮ್ ಎನ್ ರಘು,ಕಾಲೇಜಿನ ಸಿಬ್ಬಂದಿ ಸೇರಿದಂತೆ ವಿ ಅಮರ್ ಸೇರಿದಂತೆ ಇತರರು ಇದ್ದಾರೆ.