ಕರ್ನಾಟಕ

karnataka

ETV Bharat / state

Phone Call ವಿಚಾರ​​​ : ಸೆಕೆಂಡ್​​ ಬಾಯ್​ಫ್ರೆಂಡ್ ಜೊತೆ ಸೇರಿ ಲವರ್​​​ ಹತೈಗೈದ ಯುವತಿ

ಪ್ರಿಯತಮೆಗೆ ಬರುತ್ತಿದ್ದ ಕಾಲ್​ಗಳ ಕುರಿತು ಪ್ರಶ್ನಿಸಿದ ಪ್ರಿಯಕರನನ್ನು ಮತ್ತೋರ್ವ ಪ್ರೇಮಿಯ ಜೊತೆ ಗೂಡಿ ಪ್ಲಾನ್​ ಮಾಡಿ ಹತ್ಯೆಗೈದು ಪರಾರಿಯಾಗಿದ್ದ ಇಬ್ಬರು ಐನಾತಿ ಲವರ್ಸ್​ಅನ್ನು ಬಂಧಿಸಲಾಗಿದೆ.

lover-murderer-in-chikkaballapura
ಲವರ್​​​ ಹತೈ

By

Published : Aug 16, 2021, 4:05 PM IST

ಚಿಕ್ಕಬಳ್ಳಾಪುರ: ಪ್ರೇಯಸಿಗೆ ಬರುತ್ತಿದ್ದ ಫೋನ್ ಕಾಲ್​‌ಗಳನ್ನು ಪ್ರಶ್ನಿಸಿದ ಹಿನ್ನೆಲೆ ಪ್ರಿಯಕರನನ್ನು ಅರಣ್ಯ ಪ್ರದೇಶಕ್ಕೆ ಕರೆದು ಮತ್ತೋರ್ವ ಪ್ರಿಯಕರನೊಂದಿಗೆ ಸೇರಿ ಭೀಕರವಾಗಿ ಕೊಲೆ ಮಾಡಿದ ಯುವತಿ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ದುರ್ದೈವಿ ಫೈಜಲ್ ಖಾನ್ ಬಿನ್ ಅಯೂಬ್ ಖಾನ್ (24) ಆಂಧ್ರಪ್ರದೇಶದ ಹಿಂದುಪುರ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳು ಹಿಂದುಪುರದ ಮುದುಪಿ ಗ್ರಾಮದ ಪ್ರಮೀಳಾ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ.

ಪ್ರಕರಣ ಹಿನ್ನೆಲೆ..

ಕಳೆದ ಆಗಸ್ಟ್ 5 ರಂದು ತಾಲೂಕಿನ ರಾಮಚಂದ್ರಪುರ ಅರಣ್ಯ ಪ್ರದೇಶ ವಲಯದಲ್ಲಿ ನೀರು ನಿಲ್ಲಲು ತೋಡಿರುವ ಗುಂಡಿಯಲ್ಲಿ 34 ವರ್ಷದ ಅಪರಿಚಿತ ವ್ಯಕ್ತಿ ಶವವೊಂದು ಪತ್ತೆಯಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಮೃತ ದೇಹವನ್ನು ಶವಾಗಾರಕ್ಕೆ ರವಾನಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಪೋಸ್ಟ್‌ಮಾರ್ಟನ್ ರಿಪೋರ್ಟ್‌ನಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿರುವುದಾಗಿ ತಿಳಿದು ಬಂದ ಹಿನ್ನೆಲೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದರು.

ಆಟೋ ಚಾಲಕ ಫೈಜಲ್ ಖಾನ್ ಹಾಗೂ ಪ್ರಮೀಳಾ ಹಿಂದುಪುರದಲ್ಲಿ ವಾಸವಾಗಿದ್ದರು. ಪ್ರಮೀಳಾಗೆ ಬರುತ್ತಿದ್ದ ಫೋನ್ ಕಾಲ್‌ಗಳ ಬಗ್ಗೆ ಕೇಳಿ ಫೈಜಲ್​​ ಕಿರುಕುಳ ನೀಡುತ್ತಿದ್ದ. ಇದರಿಂದ ಕೋಪಗೊಂಡ ಪ್ರಮೀಳಾ ತನ್ನ ಮತ್ತೋರ್ವ ಪ್ರಿಯಕರ ಸುರೇಶ್‌ಗೆ ಮಾಹಿತಿ ನೀಡಿ ಕೊಲೆ ಮಾಡಲು ಪ್ಲಾನ್ ಮಾಡಿದ್ದಳು.

ಸಂಚು ರೂಪಿಸಿ ಕಳೆದ 5 ರಂದು ಗೌರಿಬಿದನೂರು ತಾಲೂಕಿನ ರಾಮಚಂದ್ರಪುರ ಅರಣ್ಯ ಪ್ರದೇಶಕ್ಕೆ ಫೈಜಲ್ ಖಾನ್‌ನನ್ನು ಬರುವಂತೆ ಹೇಳಿದ್ದಳು. ಪ್ರೇಯಸಿಯ ಕರೆಗೆ ಸ್ಪಂದಿಸಿದ ಫೈಜಲ್ ಖಾನ್ ಸ್ಥಳಕ್ಕೆ ಬರುತ್ತಿದ್ದಂತೆ ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಹಗ್ಗ ಬಿಗಿದು ಬಿಯರ್ ಬಾಟಲ್‌ನಿಂದ ತಲೆಗೆ ಹೊಡೆದಿದ್ದಾರೆ. ನಂತರ ಗುರುತು ಸಿಗಬಾಗದು ಎಂದು ಬೈಕ್ ಸ್ಟಾಂಡ್‌ ಹಾಗೂ ಕಲ್ಲಿನಿಂದ ಫೈಜಲ್​ ಮುಖ ಜಜ್ಜಿದ್ದಾರೆ. ನಂತರ ಮೃತನ ಮೊಬೈಲ್ ತೆಗೆದುಕೊಂಡು, ಶವವನ್ನು ನೀರು ನಿಲ್ಲಲು ತೆಗೆದಿದ್ದ ಜಾಗದಲ್ಲಿ ಹೂತು ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಸೂಚನೆಯಂತೆ ಪ್ರಕರಣವನ್ನು ಭೇದಿಸಿದ ಗೌರಿಬಿದನೂರು ಪೊಲೀಸ್ರು ಮೊಬೈಲ್ ಫೋನ್ ಸಿಗ್ನಲ್ ಆದರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details