ಚಿಕ್ಕಬಳ್ಳಾಪುರ: ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ವಿವಾಹವಾಗಿದ್ದು, ಪೋಷಕರ ವಿರೋಧದ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ತಾಲೂಕಿನ ಬಚ್ಚವಾರ ಗ್ರಾಮದ ಶಶಿಕುಮಾರ್ ಹಾಗೂ ಕಲ್ಯಾಣಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರೇಮ ವಿವಾಹವಾಗಿದ್ದು, ನೋಂದಣಿ ಮಾಡಿಸಿಕೊಂಡಿದ್ದಾರೆ.
ಪ್ರೀತಿಸಿ ಮದುವೆಯಾದ ಜೋಡಿ: ರಕ್ಷಣೆ ಕೋರಿ ಪೊಲೀಸರಿಗೆ ಮನವಿ
ಪೋಷಕರ ವಿರೋಧ ಮಧ್ಯೆ ಪ್ರೇಮ ವಿವಾಹವಾಗಿರುವ ಜೋಡಿಯೊಂದು ಇದೀಗ ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರೀತಿಸಿ ಮದುವೆಯಾದ ಜೋಡಿ: ರಕ್ಷಣೆಗೆ ಪೊಲೀಸರಿಗೆ ಮನವಿ
'ನಾವು ಪ್ರೀತಿಸುವ ವಿಚಾರ ತಿಳಿದಾಗ ಪೋಷಕರು ಅಡ್ಡಿಪಡಿಸಿದ್ದಾರೆ. ಈಗಾಗಲೇ ಒಂದು ಬಾರಿ ನಮ್ಮ ಮನೆಗಳಲ್ಲಿ ಗಲಾಟೆಯೂ ನಡೆದಿದೆ. ಆದ್ದರಿಂದ ನಾವು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದೇವೆ. ನಮ್ಮ ಕುಟುಂಬದವರು ನಮಗೆ ಬೆದರಿಕೆ, ಕಿರುಕುಳ ನೀಡುತ್ತಿದ್ದಾರೆ. ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದು, ನಮಗೆ ರಕ್ಷಣೆ ಬೇಕಾಗಿದೆ' ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ:ಮಾನವ ಸಹಿತ ಗಗನಯಾನ ಯೋಜನೆ: ಇಸ್ರೋಗೆ ಮೊದಲ ಹಂತದ ಹಾರ್ಡ್ವೇರ್ ಹಸ್ತಾಂತರ
Last Updated : Apr 5, 2022, 9:51 AM IST