ಕರ್ನಾಟಕ

karnataka

ETV Bharat / state

ಜಮೀನು ವಿವಾದ: ಜಗಳ ತಾರಕಕ್ಕೇರಿ ವ್ಯಕ್ತಿಗೆ ಚಾಕುವಿನಿಂದ ಇರಿದೇ ಬಿಟ್ಟ! ಮೊಬೈಲ್‌ ವಿಡಿಯೋ - ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮ

ಜಮೀನು ವಿವಾದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ಜಗಳ ತಾರಕಕ್ಕೇರಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಮೀನು ವಿವಾದ ಹಿನ್ನೆಲೆ ವ್ಯಕ್ತಿಗೆ ಚಾಕು ಇರಿತ

By

Published : Nov 6, 2019, 7:47 PM IST

Updated : Nov 6, 2019, 8:19 PM IST

ಚಿಕ್ಕಬಳ್ಳಾಪುರ: ಜಮೀನು ವಿವಾದ ಕಾರಣಕ್ಕಾಗಿ ಇಬ್ಬರ ನಡುವಿನ ಜಗಳ ಮಿತಿಮೀರಿ ಚಾಕುವಿನಿಂದ ವ್ಯಕ್ತಿಯೋರ್ವನಿಗೆ ಇರಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೆಂಕಟರೋಣ ಎಂಬಾತ ಕೃಷ್ಣ ಎಂಬವನಿಗೆ ಚಾಕುವಿನಿಂದ ಇರಿದಿದ್ದಾನೆ. ಆತ ಚಾಕು ಹಿಡಿದು ಇರಿಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಜಮೀನು ವಿವಾದ ಹಿನ್ನೆಲೆ ವ್ಯಕ್ತಿಗೆ ಚಾಕು ಇರಿತ

ಜಮೀನು‌ ವಿವಾದ ನೆಪದಲ್ಲಿ ವೆಂಕಟರೋಣ ಹಾಗೂ ಕೃಷ್ಣ ನಡುವೆ ತೆಲುಗು ಭಾಷೆಯಲ್ಲಿ ವಾಗ್ವಾದ ನಡೆಯುತ್ತಿತ್ತು. ಈ ವೇಳೆ ವೆಂಕಟರೋಣ ಚಾಕುವಿನಿಂದ‌ ಇರಿಯುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗೆ ಬೆದರಿಕೆ ಹಾಕುತ್ತಾ ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ.

ಗಾಯಾಳು ಕೃಷ್ಣನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಚೇನಹಳ್ಳಿ ಪೊಲೀಸರು ವೆಂಕಟರೋಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Last Updated : Nov 6, 2019, 8:19 PM IST

ABOUT THE AUTHOR

...view details