ಚಿಕ್ಕಬಳ್ಳಾಪುರ : ಜಿಲ್ಲೆಯ ಗೌರಿಬಿದನೂರಿನ ವಿದುರಾಶ್ವತ್ಥ, ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಪ್ರಸಿದ್ಧಿ ಪಡೆದಿದೆ. ಇದೇ ಸ್ಥಳದಿಂದ ಈಗ ಕಾಂಗ್ರೆಸ್ ಪಕ್ಷ ಸಿದ್ದು ಹಾಗೂ ಡಿಕೆಶಿ ನೇತೃತ್ವದಲ್ಲಿ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರಾಜಕೀಯ ಪಾಳಯದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ.
ಹಿಂದೆ ಕಾಂಗ್ರೆಸ್ ನಾಯಕರು ಎಲ್ಲೇ ಚಳವಳಿ ನಡೆಸಿದರೂ ಹೋರಾಟದ ಸಂಕೇತವಾಗಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರು. ಬ್ರಿಟಿಷರು ಇದನ್ನು ನಿಷೇಧಿಸಿದ್ದರೂ ಮಂಡ್ಯದ ಶಿವಪುರದಲ್ಲಿ ನಡೆದ ತ್ರಿವರ್ಣ ಧ್ವಜ ಸತ್ಯಾಗ್ರಹ ಯಶಸ್ವಿಯಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ತಾಲೂಕಿನ ವಿದುರಾಶ್ವತ್ಥದಲ್ಲೂ ಧ್ವಜ ಸತ್ಯಾಗ್ರಹವಾದರೆ ಹೆಚ್ಚು ಜನರನ್ನು ಕಾಂಗ್ರೆಸ್‌ನತ್ತ ಆಕರ್ಷಿಸಬಹುದು ಎನ್ನುವ ಆಲೋಚನೆಯೊಂದಿಗೆ ಕಾಂಗ್ರೆಸ್ ಅಂದು ಸತ್ಯಾಗ್ರಹಕ್ಕೆ ಮುಂದಾಗಿತ್ತು.
ಆದರೆ, ಸತ್ಯಾಗ್ರಹ ಮಣಿಸಲು ಸಶಸ್ತ್ರ ಪೊಲೀಸರು ಒಂದು ತಿಂಗಳಿಂದ ಷಡ್ಯಂತ್ರ ಹೆಣೆದಿದ್ದು 1938 ರಂದು ಹೋರಾಟಗಾರರು ಧ್ವಜ ಹಾರಿಸಲು ಮುಂದಾದಾಗ ಲಾಠಿಚಾರ್ಜ್ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು,ಇಟ್ಟಿಗೆ ತೂರಿದ್ದರು, ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ಗೆ 32 ಕ್ಕೂ ಹೆಚ್ಚು ಜನ ಹುತಾತ್ಮರಾಗಿದ್ದಕ್ಕಾಗಿ, ಕರ್ನಾಟಕದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ಥಳವಾಗಿ ಇದು ಪ್ರಸಿದ್ಧಿ ಪಡೆಯಿತು.