ಕರ್ನಾಟಕ

karnataka

ETV Bharat / state

ನಿಮ್ಗೆ ಮಾನ, ಮಾರ್ಯಾದೆ ಇದ್ರೇ ರಾಜೀನಾಮೆ ನೀಡಿ .. ಕೈ ನಾಯಕರ ವಿರುದ್ಧ ಡಾ. ಸುಧಾಕರ್ ಕಿಡಿ​ - ಅನರ್ಹ ಶಾಸಕ ಸುಧಾಕರ್

ನಿಮ್ಗೆ ಮಾನ, ಮಾರ್ಯಾದೆ ಇದ್ರೇ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ಕಾಂಗ್ರೆಸ್ ಪಕ್ಷಕ್ಕೆ ಮೌಲ್ಯಗಳಿದ್ದರೆ ಮೊದಲು ರಮೇಶ್ ಕುಮಾರ್ ಸೇರಿ ಶಿವಶಂಕರ್ ರೆಡ್ಡಿಯನ್ನೂ ವಜಾ ಮಾಡಬೇಕೆಂದು ಕಾಂಗ್ರೆಸ್ ವಿರುದ್ಧ ಅನರ್ಹ ಶಾಸಕ ಡಾ. ಸುಧಾಕರ್​ ಹರಿಹಾಯ್ದರು.

ಅನರ್ಹ ಶಾಸಕ ಸುಧಾಕರ್

By

Published : Aug 3, 2019, 9:40 PM IST

ಚಿಕ್ಕಬಳ್ಳಾಪುರ:ಒಬ್ಬ ದಲಿತ ಎಂಪಿಯನ್ನು ಸೋಲಿಸಿದ್ದಾರೆ. ನಿಮ್ಗೆ ಮಾನ, ಮಾರ್ಯಾದೆ ಇಲ್ವಾ.. ನಿಮಗೆ ಹೇಳೋರು ಕೇಳೋರು ಯಾರೂ ಇಲ್ವಾ.. ಓ ನೀವು ಬೃಹಸ್ಪತಿಗಳೆಂದು ತಿಳಿದುಕೊಂಡಿದ್ದೀರಾ ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ ಪರೋಕ್ಷವಾಗಿ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ. ಸುಧಾಕರ್​ ಕಿಡಿಕಾರಿದರು.

ಕಾಂಗ್ರೆಸ್​​ ನಾಯಕರ ವಿರುದ್ಧ ಡಾ. ಸುಧಾಕರ್ ಕಿಡಿ​..

ತಮ್ಮ ಕ್ಷೇತ್ರದ ದಿಬ್ಬೂರು ಗ್ರಾಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಸುಧಾಕರ್, ಕಾಂಗ್ರೆಸ್ ಪಕ್ಷದ ವರಿಷ್ಠರು ಸೇರಿದಂತೆ ಮಾಜಿ ಸ್ಪೀಕರ್ ವಿರುದ್ದ ಕಿಡಿಕಾರಿದ್ದಾರೆ. ಸದ್ಯ ಈಗ ಕಾಂಗ್ರೆಸ್ ಪಕ್ಷ ನನ್ನನ್ನು ವಜಾ ಮಾಡಿದೆ. ಯಾವುದೇ ವಿಚಾರಣೆ ನಡೆಸದೆ ಪಕ್ಷದಿಂದ ವಜಾ ಮಾಡಿದ್ದಾರೆ. ಆದರೆ, ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಎಂದು ಹೇಳಲಿ. ನಾನು ಪಕ್ಷದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಸಣ್ಣ ಚುನಾವಣೆಯಲ್ಲಿಯೂ ಯಾವುದೇ ಲೋಪವು ಆಗಿಲ್ಲಾ. ಆದರೆ, ಯಾವುದೇ ವಿಚಾರಣೆಯನ್ನೂ ನಡೆಸದೆ ವಜಾ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.

ನಿಮ್ಗೆ ಮಾನ, ಮರ್ಯಾದೆ ಇದ್ದರೆ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ. ಕಾಂಗ್ರೆಸ್ ಪಕ್ಷಕ್ಕೆ ಮೌಲ್ಯಗಳಿದ್ದರೆ ಮೊದಲು ರಮೇಶ್ ಕುಮಾರ್ ಸೇರಿದಂತೆ ಶಿವಶಂಕರ್ ರೆಡ್ಡಿಯನ್ನೂ ವಜಾ ಮಾಡಬೇಕೆಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಸರ್ಕಾರದ ಆಡಳಿತದ ವಿರುದ್ದವಾಗಿ ಮನನೊಂದು ರಾಜೀನಾಮೆ ಕೊಟ್ಟಿದ್ದೇನೆ. ಆದರೆ, ಕಾಂಗ್ರೆಸ್ ಪಕ್ಷದ ನಾಯಕರೇ ನನ್ನನ್ನ ವಜಾ ಮಾಡಿದ್ದಾರೆ. ನಾನು ಕ್ಷೇತ್ರವನ್ನು ಬಲಪಡಿಸಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಕೆಲವರಂತೆ 20ವರ್ಷಗಳ ಕಾಲ ಇದ್ದ ಸ್ಥಳದಲ್ಲಿಯೇ ಗೂಟಾ ಹಾಕಿಕೊಂಡಿಲ್ಲ. ಎಷ್ಟು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆಂಬುದು ಮುಖ್ಯವಲ್ಲ. ಯಾವ ಕೆಲಸ ಮಾಡಿದ್ದೇನೆಂಬುವುದು ಮುಖ್ಯ ಎಂದು ಕಾಂಗ್ರೆಸ್​​ ನಾಯಕರನ್ನು ಕುಟುಕಿದರು.

ABOUT THE AUTHOR

...view details