ಚಿಕ್ಕಬಳ್ಳಾಪುರ :ಹಣ ದುಪ್ಪಟ್ಟು ಮಾಡಿಕೊಡುತ್ತೇವೆಂದು ವಂಚನೆ ಮಾಡುತ್ತಿದ್ದ ಆರು ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಣ ದುಪ್ಪಟ್ಟು ಮಾಡಿಕೊಡುವ ಆಸೆ: ನಕಲಿ ನೀಡಿ, ಅಸಲಿ ಹಣದೊಂದಿಗೆ ಪರಾರಿಯಾಗಿದ್ದ ಖದೀಮರ ಬಂಧನ - kannada news
ಹಣ ದುಪ್ಪಟ್ಟ ಮಾಡುವುದಾಗಿ ಹೇಳಿ ಅಸಲಿ ನೋಟು ತೆಗೆದುಕೊಂಡು ನಕಲಿ ನೋಟು ನೀಡಿ ಪರಾರಿಯಾಗುತ್ತಿದ್ದ ಖದೀಮರ ಬಂಧನವಾಗಿದೆ.
ಅಮಾಯಕರನ್ನು ಟಾರ್ಗೆಟ್ ಮಾಡಿ ಹಣ ದುಪ್ಪಟ್ಟ ಮಾಡುವುದಾಗಿ ಹೇಳಿ ಅಸಲಿ ನೋಟುಗಳನ್ನು ತೆಗೆದುಕೊಂಡು ನಕಲಿ ನೋಟುಗಳನ್ನು ನೀಡಿ ಲಕ್ಷಾಂತರ ರೂಪಾಯಿಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಸದ್ಯ ಒಬ್ಬ ಮಹಿಳೆ ಸೇರಿ 11 ಜನ ಖತರ್ನಾಕ್ ಗ್ಯಾಂಗ್ ಅಂದರ್ ಆಗಿರುವ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಂಚನೆ ಮಾಡಿದ್ದ ಖದೀಮರು ಜಿಲ್ಲೆಯ ಮುರಗಮಲ್ಲದಲ್ಲಿ ಕೈಚಳಕ ತೋರಿದ್ದು, ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.75 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.