ಚಿಕ್ಕಬಳ್ಳಾಪುರ : ರಸ್ತೆ ದಾಟುತ್ತಿದ್ದ ವೇಳೆ ಟಿಪ್ಪರ್ ಹರಿದು 20ಕ್ಕೂ ಹೆಚ್ಚು ಕುರಿ-ಮೇಕೆಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಪೈಲಗುರ್ಕಿ ಸಮೀಪ ನಡೆದಿದೆ.
ಟಿಪ್ಪರ್ ಹರಿದು 20ಕ್ಕೂ ಅಧಿಕ ಕುರಿ-ಮೇಕೆಗಳು ಸಾವು: ಕಂಗಾಲಾದ ಮಾಲೀಕ! - ಚಿಕ್ಕಬಳ್ಳಾಪುರ ಟಿಪ್ಪರ್ ಅಪಘಾತ ಸುದ್ದಿ
ಟಿಪ್ಪರ್ ಹರಿದು 20ಕ್ಕೂ ಅಧಿಕ ಕುರಿ ಹಾಗೂ ಮೇಕೆಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಪೈಲಗುರ್ಕಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ.
ಟಿಪ್ಪರ್ ಹರಿದು 50 ಕ್ಕೂ ಅಧಿಕ ಕುರಿ ಮೇಕೆಗಳು ಸಾವು
ತಾಲೂಕಿನ ದೊಡ್ಡಪೈಲಗುರ್ಕಿ ಗ್ರಾಮದ ಕೆಂಪಯ್ಯ ಎಂಬುವವರಿಗೆ ಸೇರಿದ 20ಕ್ಕೂ ಹೆಚ್ಚಿನ ಕುರಿ ಮತ್ತು ಮೇಕೆಗಳು ಸಾವನ್ನಪ್ಪಿವೆ. ಎಂದಿನಂತೆ ಕುರಿಗಳನ್ನು ಮೇಯಿಸಿಕೊಂಡು ಬರುವಾಗ ರಾಷ್ಟ್ರೀಯ ಹೆದ್ದಾರಿ 7ರ ದಾಟುವಾಗ ಈ ಅವಘಡ ಸಂಭವಿಸಿದೆ. ಇನ್ನು ಕುರಿಗಳನ್ನು ಕಳೆದುಕೊಂಡ ಮಾಲೀಕನಿಗೆ ದಿಕ್ಕು ತೋಚದಂತಾಗಿದೆ
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Last Updated : Oct 23, 2019, 8:05 AM IST