ಚಿಕ್ಕಬಳ್ಳಾಪುರ:ಹೆಲ್ಮೆಟ್ ಹಾಕಿಲ್ಲ ಎಂದು ಫೆೈನ್ ಹಾಕಿದ್ದಕ್ಕೆ ಪೊಲೀಸರ ಜೆೊತೆ ಬೆೈಕ್ ಸವಾರನೆೊಬ್ಬ ಗಲಾಟೆಗಿಳಿದು ಮೊಂಡುವಾದ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೆೈರಲ್ ಆಗಿದೆ.
10 ದಿನಗಳ ಹಿಂದೆ ನಗರದ ಹೆೊರವಲಯದ ಹಾರೋಬಂಡೆ ಬಳಿ ಈ ಘಟನೆ ನಡೆದಿದೆ. ಹೆಲ್ಮೆಟ್ ಹಾಕದೆ ಬೆೈಕ್ನಲ್ಲಿ ಬರುತ್ತಿದ್ದ ಸವಾರನೆೊಬ್ಬನನ್ನು ಪೊಲೀಸರು ತಡೆದು, ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಕಟ್ಟುವಂತೆ ತಿಳಿಸಿದ್ದಾರೆ.
ದಂಡ ಯಾಕೆ ಕಟ್ಟಬೇಕು, ನನ್ನ ಬೈಕ್, ನನ್ನ ಹಣ. ಏನಾದ್ರೂ ಆದ್ರೆ ನನಗೇ ಆಗುತ್ತದೆ ಎಂದು ಪೊಲೀಸರ ಜೆೊತೆ ಸವಾರ ಉದ್ದಟತನ ಮೆರೆದ್ದಾನೆ. ಅಲ್ಲದೆ ಪೊಲೀಸ್ ಜೀಪ್ ಮೇಲೆ ಕಲ್ಲು ಎತ್ತಿ ಹಾಕಲು ಯತ್ನಿಸಿದ್ದಾನೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಪೊಲೀಸರು ಮೊಬೆೈಲ್ನಲ್ಲಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ.
ನಂತರ ಸವಾರ ಬೆೈಕ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಕಳೆದ 10 ದಿನಗಳಿಂದ ಬೆೈಕ್ ವಾಪಸ್ ಪಡೆಯಲು ಸಹ ಆತ ಆಗಮಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.