ಕರ್ನಾಟಕ

karnataka

ETV Bharat / state

ನಿವೃತ್ತ ಯೋಧನಿಗೆ ಮಂಜೂರಾಗಿದ್ದ ಜಮೀನಿಗೆ ಸ್ಥಳೀಯರ ಕ್ಯಾತೆ: ಸಮಸ್ಯೆ ಬಗೆಹರಿಸುವಂತೆ ರೈತ ಸಂಘ ಪ್ರತಿಭಟನೆ

ನಿವೃತ್ತ ಯೋಧನಿಗೆ ಮಂಜೂರು ಮಾಡಿದ್ದ ಜಮೀನಿನ ಬಗ್ಗೆ ಸ್ಥಳೀಯರು ಕ್ಯಾತೆ ತೆಗೆದಿದ್ದಾರೆ. ಹೀಗಾಗಿ ನಿವೃತ್ತ ಸೈನಿಕರ ಸಮಸ್ಯೆ ಬಗೆಹರಿಸುವಂತೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ.

farmer-protest-to-solve-the-problem-of-ex-army-man
ರೈತ ಸಂಘದ ಪ್ರತಿಭಟನೆ

By

Published : Jan 21, 2020, 8:00 PM IST

ಚಿಕ್ಕಬಳ್ಳಾಪುರ: ಸರ್ಕಾರ ನಿವೃತ್ತ ಯೋಧನಿಗೆ ಮಂಜೂರು ಮಾಡಿದ್ದ ಜಮೀನಿನ ಬಗ್ಗೆ ಸ್ಥಳೀಯರು ಆಕ್ಷೇಪ ಎತ್ತಿದ್ದಾರೆ. ಇದರಿಂದ ನಿವೃತ್ತ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದು, ಅವರ ಸಮಸ್ಯೆ ಬಗೆಹರಿಸುವಂತೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ.

ಸುಮಾರು ಎರಡು ವರ್ಷಗಳ ಹಿಂದೆ ಮಾಜಿ ಯೋಧ ವೆಂಕಟೇಶ್ ಎಂಬುವರಿಗೆ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಸರ್ವೇ ನಂಬರ್ 281 ರಲ್ಲಿ 4-38 ಕುಂಟೆ ಜಮೀನು ಮಂಜೂರಾಗಿತ್ತು. ಸದ್ಯ ಆ ಜಮೀನಿಗೆ ಸಂಬಂಧಿಸಿದಂತೆ ಸ್ಥಳೀಯರು ಕ್ಯಾತೆ ತೆಗೆದಿದ್ದಾರೆ. ಈ ಬಗ್ಗೆ ಗುಡಿಬಂಡೆ ತಾಲೂಕಿನ ತಹಶಿಲ್ದಾರ್ ಗೆ ಎರಡು ವರ್ಷಗಳಿಂದ ದೂರು ನೀಡಿ, ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಯೋಧನ ಜಮೀನು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

ಇದರಿಂದ ಸಿಡಿಮಿಡಿಗೊಂಡ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಮಾಜಿ ಯೋಧನಿಗೆ ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಜಮೀನು ನೀಡುವಂತೆ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ.

ABOUT THE AUTHOR

...view details