ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕರ್ಪ್ಯು ವಿಧಿಸಲಾಗಿದ್ದು ಸಂಪೂರ್ಣ ಸ್ತಬ್ಧವಾಗಿದೆ. ಆದರೆ, ವ್ಯಕ್ತಿಯೊಬ್ಬ ಸರ್ಕಾರಿ ವಾಹನವನ್ನು ದುರಪಯೋಗ ಮಾಡಿಕೊಂಡು ರಸ್ತೆಯಲ್ಲಿ ಸಂಚಾರ ನಡೆಸಿ ಸಿಕ್ಕಿಬಿದ್ದಿದ್ದಾನೆ.
ಲಾಕ್ಡೌನ್ ಇದ್ದರೂ ಚಾಲಕನ ದರ್ಬಾರ್... ಸರ್ಕಾರಿ ವಾಹನ ದುರ್ಬಳಕೆ - ಚಿಕ್ಕಬಳ್ಳಾಪುರ ಅಪರಾಧ ಸುದ್ದಿ
ಆರೋಗ್ಯ ಇಲಾಖೆಯ ವಾಹನದ ಚಾಲಕ ತನ್ನ ಸಂಬಂಧಿಕರನ್ನು ವಾಹನದಲ್ಲಿ ಕೂರಿಸಿಕೊಂಡು ನಗರದಲ್ಲಿ ಓಡಿಸಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಲಾಕ್ಡೌನ್ನಲ್ಲಿ ಚಾಲಕನ ದರ್ಬಾರ್
ಆರೋಗ್ಯ ಇಲಾಖೆಯ ವಾಹನದ ಚಾಲಕ ತನ್ನ ಸಂಬಂಧಿಕರನ್ನು ವಾಹನದಲ್ಲಿ ಕೂರಿಸಿಕೊಂಡು ನಗರದಲ್ಲಿ ಓಡಿಸಿ, ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ವಾಹನ ಬೆಂಗಳೂರಿನ ಆರೋಗ್ಯ ಇಲಾಖೆಗೆ ಸಂಬಂಧಪಟ್ಟಿದ್ದು ಎಂದು ತಿಳಿದುಬಂದಿದೆ.
ನಗರ ಪೊಲೀಸರು ಈ ವಾಹನವನ್ನು ತಡೆದು ಚಾಲಕನನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.