ಕರ್ನಾಟಕ

karnataka

ETV Bharat / state

ಬೆಂಗಳೂರಿಗರು ತರಕಾರಿ ತಿನ್ನುತ್ತಿರೋದು ಚಿಕ್ಕಬಳ್ಳಾಪುರದ ರೈತರಿಂದ : ಸಚಿವ ಸದಾನಂದ ಗೌಡ

ಜಿಲ್ಲಾ ಮಟ್ಟದ ಕೃಷಿ ಮೇಳ-2020 ರಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬೆಂಗಳೂರಿನ‌ ಜನತೆ ತರಕಾರಿ ತಿನ್ನುತ್ತಿರುವುದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ರೈತರಿಂದ ಎಂದು ಹೇಳಿದರು.

dv sadandagowda
ಸದಾನಂದ ಗೌಡ

By

Published : Feb 16, 2020, 3:48 AM IST

ಚಿಕ್ಕಬಳ್ಳಾಪುರ: ಬೆಂಗಳೂರಿನ‌ ಜನತೆ ತರಕಾರಿ ತಿನ್ನುತ್ತಿರುವುದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ರೈತರಿಂದ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಜಿಲ್ಲಾ ಮಟ್ಟದ ಕೃಷಿ ಮೇಳ-2020

ನಗರದ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕೃಷಿ ಮೇಳ-2020 ರ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಕೃಷಿಕ ಈ ದೇಶದ ಬೆನ್ನೆಲುಬು. ಇಂದಿಗೂ ದೇಶದಲ್ಲಿ ಶೇ.60 ರಷ್ಟು ಜನ ಕೃಷಿ ಆಧಾರಿಸಿ ಜೀವನ ನಡೆಸುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ರೈತರಿಂದ ಬೆಂಗಳೂರಿನ ಜನತೆ ತರಕಾರಿ ತಿನ್ನುತ್ತಿದ್ದಾರೆ‌. ಈ ಭಾಗದ ರೈತರು ಸಾವಿರಾರು ಅಡಿಗಳಿಂದ ನೀರು ಕೊರೆದು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಈ ಭಾಗದ ಜನರಿಗೆ ನೀರನ್ನು ಒದಗಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಎರಡು ಜಿಲ್ಲೆಗಳ ರೈತರು ಹಾಗೂ ಸಂಘಟನೆಗಳು ಹಲವಾರು ವರ್ಷಗಳಿಂದ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಭಾಗದ ಜನರಿಗಾಗಿ ಸ್ಥಳೀಯ ಶಾಸಕರ ಜೊತೆಗೆ, ನಾನು ಕೂಡ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಉಪ ಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಣ್ಣ ಸೇರಿದಂತೆ ರಥ ಮುಖಂಡರು ಹಾಗೂ ರೈತರು ಭಾಗಿಯಾಗಿದ್ದರು.

ABOUT THE AUTHOR

...view details