ಬಾಗೇಪಲ್ಲಿ (ಚಿಕ್ಕಬಳ್ಳಾಪುರ):ಜುಲೈ 19ರಂದು ಈಟಿವಿ ಭಾರತದಲ್ಲಿ ಪ್ರಕಟವಾದವರದಿಯಿಂದ ಎಚ್ಚೆತ್ತುಕೊಂಡ ಪೊಲೀಸರು, ಅಕ್ರಮ ಮದ್ಯ ಮಾರಾಟ ತಾಣಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಪಡಿಸಿದ್ದಾರೆ.
ಈಟಿವಿ ಭಾರತ ವರದಿ ಫಲಶೃತಿ: ಅಕ್ರಮ ಮದ್ಯ ಮಾರಾಟ ತಾಣಗಳ ನಾಶ - ಅಕ್ರಮ ಮದ್ಯ
ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಗಡಿ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದ ಕಾರಣ, ಜುಲೈ 19ರಂದು ಈಟಿವಿ ಭಾರತದಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಪೊಲೀಸರು, ಅಕ್ರಮ ಮದ್ಯ ಮಾರಾಟ ತಾಣಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಪಡಿಸಿದರು.
ಅಕ್ರಮ ಮದ್ಯ ಮಾರಾಟ ತಾಣಗಳ ನಾಶ
ಬರದ ನಾಡಿನ ಗಡಿ ಗ್ರಾಮಗಳಲ್ಲಿ ಹರಿಯುತ್ತಿದೆ ಅಕ್ರಮ ಮದ್ಯ! ಎಂಬ ಶೀರ್ಷಿಕೆ ಅಡಿ ಈ ವರದಿ ಪ್ರಕಟಿಸಲಾಗಿತ್ತು. ಈ ವರದಿ ಸಾಮಾಜಿಕ ಜಾಲತಾಣದ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ಹೋಗಿತ್ತು. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಅಕ್ರಮ ಮದ್ಯ ಮಾರಾಟ ತಾಣಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಇದರಿಂದಾಗಿ ಕೆಲವರ ಮೇಲೆ ಪ್ರಕರಣವೂ ದಾಖಲಾಗಿದೆ ಎಂಬ ಮಾಹಿತಿ ಇದೆ. ಆಂಧ್ರಪ್ರದೇಶದ ಗಡಿ ಗ್ರಾಮಗಳ ಮದ್ಯ ವ್ಯಸನಿಗಳಿಂದ ಎದುರಾಗುತ್ತಿದ್ದ ಆತಂಕ ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು.