ಚಿಂತಾಮಣಿ:ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಮಹಿಳೆಯೊಬ್ಬರ ಮನೆಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಂತಾಮಣಿ: ನೇಣು ಹಾಕಿಕೊಂಡಿದ್ದ ಎನ್ನಲಾದ ವ್ಯಕ್ತಿ ಕತ್ತಲ್ಲಿ ಕೊಯ್ದ ಮಾರ್ಕ್, ಕೊಲೆ ಶಂಕೆ - chikkaballapur news
ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಮಹಿಳೆಯೊಬ್ಬರ ಮನೆಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಸುಬ್ರಹ್ಮಣ್ಯ ಅಲಿಯಾಸ್ ಭಟ್ಟಿ ಬಾಬು ಎಂದು ಗುರುತಿಸಲಾಗಿದೆ. ಇವರು ಮಂಜುಳ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣುಬಿಗಿದುಕೊಂಡಿದ್ದು, ಇವರಿಬ್ಬರಿಗೂ ಹಣದ ಲೇವಾದೇವಿ ಇತ್ತು ಎನ್ನಲಾಗಿದೆ. ಸುಬ್ರಹ್ಮಣ್ಯ ಅವರು ಸಾವನ್ನಪ್ಪಿದವರ ಬಗ್ಗೆ ಅಪರಿಚಿತರು ನಗರ ಠಾಣೆಗೆ ಕರೆಮಾಡಿ ತಿಳಿಸಿದ್ದು, ಆ ಮಾಹಿತಿ ಮೇರೆಗೆ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಹಾಗೂ ಸುಬ್ರಹ್ಮಣ್ಯ ಅವರ ಮೈದುನ ಭೇಟಿ ನೀಡಿದಾಗ, ನೆಲದ ಮೇಲೆ ಶವ ಪತ್ತೆಯಾಗಿದೆ. ಅಲ್ಲದೇ, ಮನೆಯಲ್ಲಿರುವ ಸೋಫಾ ಚೆಲ್ಲಾಪಿಲ್ಲಿ ಆಗಿರುವುದು,ಅಡುಗೆ ಕೊನೆಯಲ್ಲಿ ಮೆಣಸಿನಪುಡಿ ಕೆಳಗೆ ಬಿದ್ದಿರುವುದು ಹಾಗೂ ಸುಬ್ರಹ್ಮಣ್ಯ ಅವರ ಕತ್ತಲ್ಲಿ ಲೋಹದಿಂದ ಕೊಯ್ದಿರುವ ಮಾರ್ಕ್ಯಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಮೃತರ ಸಹೋದರ ರಾಜಣ್ಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.