ಬಾಗೇಪಲ್ಲಿ (ಚಿಕ್ಕಬಳ್ಳಾಪುರ):ಭೂಮಿಗೆ ಹಾನಿಯಾಗದ ಸಾಂಪ್ರದಾಯಿಕ ಕೃಷಿ ಪದ್ಧತಿಯ ಉಳಿವಿಗೆ ಹೈನುಗಾರಿಕೆ ಅವಶ್ಯಕ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.
ಗ್ರಾಮೀಣ ಸೊಗಡು ಹೈನುಗಾರಿಕೆಯಲ್ಲಿ ಅಡಗಿದೆ: ಶಾಸಕ ಸುಬ್ಬಾರೆಡ್ಡಿ - ದೇವರೆಡ್ಡಿಪಲ್ಲಿ
ಗ್ರಾಮೀಣ ಸಂಸ್ಕಾರ ಉಳಿಯಲು ಹೈನುಗಾರಿಕೆ ಉಳಿಸಿಕೊಂಡು ಹೋಗಬೇಕಾಗಿದೆ. ಹೈನುಗಾರಿಕೆ ಎಂಬುದು ಕೇವಲ ಕೆಲಸವಲ್ಲ, ಅದೊಂದು ಕುಲ ಕಸುಬು. ಭಾರತೀಯ ಸಂಸ್ಕೃತಿಯ ನೆಚ್ಚಿನ ಭಾಗವಾಗಿದ್ದು, ಗ್ರಾಮೀಣ ಸೊಗಡು ಕೂಡ ಅದರಲ್ಲಿ ಅಡಗಿದೆ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹೇಳಿದರು.
ತಾಲೂಕಿನ ಪರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವರೆಡ್ಡಿಪಲ್ಲಿಯಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಸಂಸ್ಕಾರ ಉಳಿಯಲು ಹೈನುಗಾರಿಕೆ ಉಳಿಸಿಕೊಂಡು ಹೋಗಬೇಕಾಗಿದೆ. ಹೈನುಗಾರಿಕೆ ಎಂಬುದು ಕೇವಲ ಕೆಲಸವಲ್ಲ, ಅದೊಂದು ಕುಲ ಕಸುಬು. ಭಾರತೀಯ ಸಂಸ್ಕೃತಿಯ ನೆಚ್ಚಿನ ಭಾಗವಾಗಿದ್ದು, ಗ್ರಾಮೀಣ ಸೊಗಡು ಕೂಡ ಅದರಲ್ಲಿ ಅಡಗಿದೆ ಎಂದರು.
ಹೈನುಗಾರಿಕೆಯಿಂದ ದೂರವಾದರೆ ನಾವು ಉದ್ಧಾರ ಆಗುವುದಿಲ್ಲ. ಯುವ ಪೀಳಿಗೆ ದುಡ್ಡಿನ ಹಿಂದೆ ಹೋಗುತ್ತಿದೆ. ಹಳೆಯ ತಲೆಮಾರಿನವರು ಹೈನುಗಾರಿಕೆಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಯುವಕರು ಹೈನಾಗಾರಿಕೆಯತ್ತ ಒಲವು ತೋರುವುದು ಅತ್ಯವಶ್ಯಕ ಎಂದು ಹೇಳಿದರು.