ಕರ್ನಾಟಕ

karnataka

ETV Bharat / state

ಮನೆಯಲ್ಲೇ ಇದ್ದ ವೃದ್ಧನಿಗೂ ಬಂತು ಕೊರೊನಾ: ಚಿಕ್ಕಬಳ್ಳಾಪುರ ಜನತೆಯಲ್ಲಿ ಆತಂಕ - corona latest news

ಮನೆಯಲ್ಲೇ ಇದ್ಧ ವೃದ್ಧರೊಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇದು ಮತ್ತೊಂದು ತಲೆನೋವಿಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ಜನತೆ ಘಟನೆಯಿಂದಾಗಿ ಬೆಚ್ಚಿಬಿದ್ದಿದ್ದಾರೆ.

ಎಲ್ಲೂ ಹೊರ ಹೋಗದ ವೃದ್ಧನಿಗೂ ಕೊರೊನಾ:
ಎಲ್ಲೂ ಹೊರ ಹೋಗದ ವೃದ್ಧನಿಗೂ ಕೊರೊನಾ:

By

Published : Apr 15, 2020, 9:42 AM IST

ಚಿಕ್ಕಬಳ್ಳಾಪುರ: ಎಲ್ಲೂ ಹೋಗದೆ ಮನೆಯಲ್ಲೇ ಇದ್ದ ವೃದ್ಧನಿಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿದೆ.

ಇದುವೆರಗೂ ಜಿಲ್ಲೆಯಲ್ಲಿ 12 ಕೊರೊನಾ ಸೋಂಕಿತ ಪ್ರಕರಣಗಳು ಗೌರಿಬಿದನೂರಿನಲ್ಲೇ ಪತ್ತೆಯಾಗಿದ್ದವು. ಆದರೆ ,ಮನೆಯಲ್ಲೇ ಇದ್ದ ನಗರದ 65 ವರ್ಷದ ವೃದ್ಧನಿಗೂ ಸೋಂಕು ತಗುಲಿದೆ.

ಸದ್ಯ ವೃದ್ಧನ ಪತ್ನಿ, ಮಕ್ಜಳು ಸೇರಿದಂತೆ ಮನೆ ಕೆಲಸದಾಕೆ ಮತ್ತು ಕಾರು ಚಾಲಕನನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮೊದಲೇ ಅಸ್ತಮಾ, ಬಿಪಿ ಹಾಗೂ ಸಕ್ಕರೆ ಕಾಯಿಲೆಯಿಂದ ಈ ವೃದ್ಧ ಬಳಲುತ್ತಿದ್ದರು. ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ,ಪರೀಕ್ಷೆ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

12 ಪ್ರಕರಣಗಳಿಂದ ಗೌರಿಬಿದನೂರು ರೆಡ್ ಝೋನ್ ಪಟ್ಟಿಗೆ ಸೇರಿದ್ದು ಸೀಲ್ ಡೌನ್ ಮಾಡಲಾಗಿದೆ. ಸದ್ಯ‌ ಚಿಕ್ಕಬಳ್ಳಾಪುರ ನಗರದ 12 ವಾರ್ಡ್​ಗಳನ್ನು ಸಹ ಈಗ ಸೀಲ್ ಡೌನ್ ಮಾಡಲಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ABOUT THE AUTHOR

...view details