ಕರ್ನಾಟಕ

karnataka

ETV Bharat / state

ಕೋವಿಡ್ ಕೇರ್ ಸೆಂಟರ್ ನಿರ್ಮಾಣದಿಂದ‌ ಸೋಂಕು ಹರಡುವಿಕೆಗೆ ಕಡಿವಾಣ: ಡಿಸಿ

ಜಿಲ್ಲಾಡಳಿತ ಈಗಾಗಲೇ ಹತ್ತು ಸಾವಿರ ಹಾಸಿಗೆ ಮತ್ತು ತಾಲೂಕಿನಲ್ಲಿ ಎರಡು ಸಾವಿರ ಹಾಸಿಗೆ ಇರುವ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಇದರಿಂದ ಕೊರೊನಾ ಕಡಿವಾಣಕ್ಕೆ ಅನುಕೂಲವಾಗುತ್ತದೆ.

ಕೋವಿಡ್ ಕೇರ್ ಸೆಂಟರ್ ಆಸ್ಪೆತ್ರೆಗಳ ನಿರ್ಮಾಣದಿಂದ‌ ಸೋಂಕು ಹರಡುವಿಕೆಗೆ ಕಡಿವಾಣ
ಕೋವಿಡ್ ಕೇರ್ ಸೆಂಟರ್ ಆಸ್ಪೆತ್ರೆಗಳ ನಿರ್ಮಾಣದಿಂದ‌ ಸೋಂಕು ಹರಡುವಿಕೆಗೆ ಕಡಿವಾಣ

By

Published : Jul 15, 2020, 9:46 AM IST

ಗೌರಿಬಿದನೂರು: ಕೋವಿಡ್ ಕೇರ್ ಸೆಂಟರ್​ಗಳ ನಿರ್ಮಾಣದಿಂದ‌ ಕೊರೊನಾ ಸೋಂಕು ಕಡಿವಾಣಕ್ಕೆ ಸಹಕಾರವಾಗಲಿದ್ದು, ಅಲ್ಲೀಪುರ ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಆರ್.ಲತಾ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಈಗಾಗಲೇ ಹತ್ತು ಸಾವಿರ ಹಾಸಿಗೆ ಮತ್ತು ತಾಲೂಕಿನಲ್ಲಿ ಎರಡು ಸಾವಿರ ಹಾಸಿಗೆ ಇರುವ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಇದರಿಂದ ಕೊರೊನಾ ಕಡಿವಾಣಕ್ಕೆ ಅನುಕೂಲವಾಗುತ್ತದೆ.

ಕೋವಿಡ್ ಕೇರ್ ಸೆಂಟರ್ ನಿರ್ಮಾಣದಿಂದ‌ ಸೋಂಕು ಹರಡುವಿಕೆಗೆ ಕಡಿವಾಣ

ಇದೇ ಸಂದರ್ಭದಲ್ಲಿ ಇದನ್ನು ಅರಿತು ಅಲ್ಲೀಪುರ ಗ್ರಾಮದ ಐ.ಕೆ. ಕೇರ್ ಅಸ್ಪೆತ್ರೆಯಲ್ಲಿ ಸೋಂಕು ಪೀಡಿತರಿಗೆ ಹಾಸಿಗೆ ವ್ಯವಸ್ಥೆ ಮಾಡಿರುವುದು ಮಾನವೀಯ ಕೆಲಸ. ಇದಕ್ಕೆ ಸರ್ಕಾರದಿಂದ ಎಲ್ಲಾ ಸಹಕಾರ ನೀಡಲಾಗುವುದು. ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡಿದರೆ ಕೊರೊನಾ ನಿಯಂತ್ರಣ ಮಾಡಬಹುದು ಎಂದರು.

ABOUT THE AUTHOR

...view details