ಚಿಕ್ಕಬಳ್ಳಾಪುರ :ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಮತ ಪ್ರಚಾರದಲ್ಲಿ ಮಾತನಾಡಿ, ಬಡವರ ಮಕ್ಕಳು ಎಂಎಲ್ಎ ಆಗಬಾರದಾ ಎಂದು ಸಚಿವ ಡಾ.ಸುಧಾಕರ್ ಅವರಿಗೆ ಪ್ರಶ್ನೆ ಮಾಡಿದರು. ಗುರುವಾರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮದ ವೇಳೆ ಸ್ವಗ್ರಾಮದಲ್ಲಿ ಮತಯಾಚಿಸಿದ ಅವರು, ನಿಮ್ಮೂರು ಪಕ್ಕದಲ್ಲಿ ಕಟ್ಟಿರುವ ಮೆಡಿಕಲ್ ಕಾಲೇಜ್ ತಂದಿದ್ದು ನಾನು ಅಂತ ಸುಧಾಕರ್ ಬೀಗಿದರೆ, ಅಲ್ಲಿ ಸೇರಿರುವ ಶೇ 80 ರಷ್ಟು ವಿದ್ಯಾರ್ಥಿಗಳು ನಾನು ತಯಾರು ಮಾಡಿರುವ ಹುಡುಗರು. ನಾನು ಈ ಬಾರಿ ಗೆಲ್ಲೋದು ಗ್ಯಾರಂಟಿ. ಕ್ರಷರ್ ಓನರ್ಗಳು ಕಂಟ್ರಾಕ್ಟರ್ಗಳ ಭಯ ಬಿಡಿ. ಇನ್ಮುಂದೆ ನೀವು 40% ಕಮಿಷನ್ ಕೊಡುವಂತಿಲ್ಲ ಎಂದರು.
ನನ್ನ ಸೇವೆ ನಿಮಗೆ ಗೊತ್ತು. ನಮ್ಮೂರು ಎಂಬ ಎಮೋಷನ್ ಇರುತ್ತೆ. ನನಗೆ ಒಂದು ಸಲ ಅಧಿಕಾರ ಕೊಟ್ಟು ನೋಡಿ. ಮುಂದಿನ ಐದು ವರ್ಷ ನಾನು ಓಟು ಕೇಳೋಕೆ ಬರಲ್ಲ. ನೀವು ಬೇರೆ ಪಾರ್ಟಿಯವರನ್ನು ಊರೊಳಗೆ ಕಾಲಿಡಲು ಬಿಡುವುದಿಲ್ಲ. ನಿಮ್ಮ ಮನಸ್ಸು ಗೆಲ್ಲುತ್ತೇನೆ. ಕ್ರಷರ್ಗಳ ಹೊಟ್ಟೆ ಮೇಲೆ ಹೊಡೆಯಲ್ಲ ಎಂದು ಭರವಸೆ ಕೊಟ್ಟರು.