ಚಿಕ್ಕಬಳ್ಳಾಪುರ :ಕೊಳಾಲಮ್ಮನ ಪೂಜಾರಿ ಮತ್ತು ಶಿಷ್ಯನ ಸಾವಿನ ಪ್ರಕರಣಕ್ಕೆ (priest and his disciple death) ಹೊಸ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೂ (suicide)ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಪೂಜಾರಿ ಮತ್ತು ಶಿಷ್ಯ ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿಕೊಂಡಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ(Chintamani taluk) ಗುಟ್ಟಹಳ್ಳಿ ಕೊಳಾಲಮ್ಮ ದೇವಸ್ಥಾನದಲ್ಲಿ ದೇವಿಯ ಆರಾಧಕ ಶ್ರೀಧರ್ ಮತ್ತು ಶಿಷ್ಯ ಲಕ್ಷ್ಮೀಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸಾವಿನ ರಹಸ್ಯವನ್ನು ಭೇದಿಸುವಲ್ಲಿ ನಿರತರಾಗಿದ್ದರು.
ಆದರೆ, ಇಂದು ಮೃತ ಪೂಜಾರಿಯ ಸೆಲ್ಫಿ ವಿಡಿಯೋ(selfie video) ದೊರೆತಿದೆ. ನಮ್ಮ ಸಾವಿಗೆ ಯಾರೂ ಕಾರಣವಲ್ಲವೆಂದು ಶ್ರೀಧರ್(ಅಮ್ಮ) ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾರೆ. ತದ ನಂತರ ಗುರು ಸಾವನ್ನಪ್ಪಿದ್ದಕ್ಕೆ ಶಿಷ್ಯ ಲಕ್ಷ್ಮೀಪತಿ ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿ ಅಮ್ಮನ ಪಕ್ಕದಲ್ಲಿಯೇ ನನ್ನನ್ನು ಹಾಕಿ ಎಂದು ಹೇಳಿಕೊಂಡಿದ್ದಾರೆ.