ಚಿಕ್ಕಬಳ್ಳಾಪುರ:ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ಮತಗಟ್ಟೆ ಬಳಿ ನಿಂಬೆಹಣ್ಣಿನಿಂದ ವಾಮಾಚಾರ ನಡೆಸಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಂಬಾಲಹಳ್ಳಿ ಗ್ರಾಮದ ಮತಗಟ್ಟೆ ಬಳಿ ನಡೆದಿದೆ.
ಚುನಾವಣೆಗೆ ಕೆಲವೆ ಗಂಟೆಗಳು ಬಾಕಿ ಇರುವಂತೆ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ಗೆಲುವಿನ ದಾರಿ ಹಿಡಿಯಲು ಹಾಗೂ ಮತದಾರರನ್ನು ಸೆಳೆಯಲು ವಾಮಾಚಾರ, ಮಾಟ ಮಂತ್ರಗಳ ಮೊರೆ ಹೋಗಿದ್ದಾರೆ.
ಹೌದು, ತಾಲೂಕಿನ ಕಂಬಾಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆ ಆವರಣದಲ್ಲಿ ಮತದಾರರನ್ನು ಸೆಳೆಯಲು ಮತಗಟ್ಟೆ ಬಳಿ ನಿಂಬೆಹಣ್ಣುಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಬೆಚ್ಚಿ ಬೀಳುವಂತಾಗಿದೆ.
ಅಭ್ಯರ್ಥಿಗಳಾದ ವೆಂಕಟಪ್ಪ ಮತ್ತು ರಾಮಾಂಜಿನಪ್ಪ ವಿರುದ್ಧ ಗ್ರಾಮದ ಪ್ರತ್ಯಕ್ಷದರ್ಶಿಗಳು ವಾಮಾಚಾರ ಮಾಡಿರುವ ಆರೋಪ ಮಾಡಿದ್ದು, ತಾಲೂಕಿನ ದಿಬ್ಬುರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ರಾತ್ರಿ ಗ್ರಾಮದಲ್ಲಿ ಪ್ರಚಾರ ನಡೆಸುವ ವೇಳೆ ಶಾಲೆಯ ಆವರಣದಲ್ಲಿ ನಿಂಬೆ ಹಣ್ಣುಗಳನ್ನು ಇಡುವುದನ್ನು ಗಮನಿಸಿದ ಗ್ರಾಮಸ್ಥರು ವಿಚಾರಣೆ ನಡೆಸಲು ಹೋದಾಗ ಸ್ಥಳದಿಂದ ವ್ಯಕ್ತಿಗಳು ಪರಾರಿಯಾದ್ದಾರೆ. ನಂತರ ಮಾಹಿತಿಯನ್ನು ಗ್ರಾಮದ ಹಿರಿಯರಿಗೆ ತಿಳಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇನ್ನು ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ...ಮೊದಲ ಹಂತದ ಗ್ರಾಪಂ ಚುನಾವಣೆ: ಚಿಕ್ಕಬಳ್ಳಾಪುರದಲ್ಲಿ 1008 ಪೊಲೀಸರ ನಿಯೋಜನೆ