ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ ಎಸಿಬಿ ದಾಳಿ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ಲಂಚದ ಹಣದಲ್ಲಿ ಶಾಸಕನಿಗೂ ಪಾಲು?

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಈ ದೂರು ದಾಖಲಾಗಿರುವುದು ಅನರ್ಹ ಶಾಸಕ ಸುಧಾಕರ್ ಪಾಲಿಗೆ ಮುಳ್ಳಾದಂತಿದೆ. ಲಂಚದ ಹಣದಲ್ಲಿಯೂ ಶಾಸಕರಿಗೆ 5 ಲಕ್ಷದ ಹಣ ಕೊಡಬೇಕು ಎನ್ನುವ ಅಂಶ ಎಸಿಬಿ ಅಧಿಕಾರಿಗಳು ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ ಎನ್ನಲಾಗ್ತಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ಅನರ್ಹ ಶಾಸಕ ಸುಧಾಕರ್

By

Published : Oct 18, 2019, 11:39 PM IST

ಚಿಕ್ಕಬಳ್ಳಾಪುರ:ಗುರುವಾರವಷ್ಟೇ ನಗರ ಪ್ರಾಧಿಕಾರದ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣಕ್ಕೆ ಎಸಿಬಿ ಅಧಿಕಾರಿಗಳ ದೂರಿನ ಪ್ರತಿ ಮತ್ತೊಂದು ಟ್ವಿಸ್ಟ್ ಗೆ ಅನುವು ಮಾಡಿಕೊಟ್ಟಿದೆ.

ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಈ ದೂರು ದಾಖಲಾಗಿರುವುದು ಅನರ್ಹ ಶಾಸಕ ಸುಧಾಕರ್ ಪಾಲಿಗೆ ಮುಳ್ಳಾದಂತಿದೆ. ಲಂಚದ ಹಣದಲ್ಲಿಯೂ ಶಾಸಕರಿಗೆ 5 ಲಕ್ಷ ರೂಪಾಯಿ ಹಣ ಕೊಡಬೇಕು ಎನ್ನುವ ಅಂಶ ಎಸಿಬಿ ಅಧಿಕಾರಿಗಳು ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ ಎನ್ನಲಾಗ್ತಿದ್ದು, ಇದು ಚರ್ಚೆಗೆ ಗ್ರಾಸವಾಗುತ್ತಿದೆ.

ಎಸಿಬಿ ಅಧಿಕಾರಿಗಳಿಗೆ ಉದ್ಯಮಿ ನೀಡಿದ್ದ ದೂರಿನ ಪ್ರತಿ

40% ಭೂ ಪರಿವರ್ತನೆಗೊಂಡ ನಿವೇಶನಗಳ ಮಾರಾಟಕ್ಕೆ ಉದ್ಯಮಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ 9 ಲಕ್ಷ ರೂಪಾಯಿ ಹಣಕ್ಕೆ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಅಲ್ಲದೆ, ಲಂಚದ ಹಣದಲ್ಲಿ 5 ಲಕ್ಷ ಹಣವನ್ನು ಶಾಸಕರಿಗೂ ಕೊಡಬೇಕೆಂದು, ಬೇಕಾದರೆ ಶಾಸಕರಿಗೆ ಕಾಲ್ ಮಾಡಿ 4 ಲಕ್ಷ ಕೊಡಿ ಎಂದು ಹೇಳಿದ್ದರಂತೆ. ಸದ್ಯ ಇದನ್ನೆಲ್ಲ ಉದ್ಯಮಿ ಕಾಲ್ ರೆಕಾರ್ಡ್ ಮಾಡಿದ್ದು, ಎಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು.

ಎಸಿಬಿ ಅಧಿಕಾರಿಗಳಿಗೆ ಉದ್ಯಮಿ ನೀಡಿದ್ದ ದೂರಿನ ಪ್ರತಿ

ಕಳೆದ ದಿನವಷ್ಟೇ ಬೆಂಗಳೂರಿನ ಉದ್ಯಮಿ ರಾಮಾಜಿನಪ್ಪ ದೂರಿನನ್ವಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 3 ಲಕ್ಷ ಹಣವನ್ನು ಸ್ವೀಕರಿಸುವ ವೇಳೆ ಅಧಿಕಾರಿ ಕೃಷ್ಣಪ್ಪ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಉಪಚುನಾವಣೆಯ ಹೊಸ್ತಿಲಲ್ಲಿ ಅನರ್ಹ ಶಾಸಕನ ಹೆಸರು ಬಯಲಿಗೆ ಬಂದಿರುವ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಸಿಬಿ ದೂರಿನ ಪ್ರತಿಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ.

ABOUT THE AUTHOR

...view details