ಚಿಂತಾಮಣಿ:ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿ ಪೆರಮಾಚನಹಳ್ಳಿ ಸಮೀಪ ನಡೆದಿದೆ.
ರಾಜಕುಮಾರ್ (50) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಬೆಂಗಳೂರು ರಸ್ತೆಯ ಕೈವಾರ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಕೋಲಾರ ತಾಲೂಕು ಕಾಡಹಳ್ಳಿ ಗ್ರಾಮದ ರಾಜಕುಮಾರ್ ಬರುತ್ತಿದ್ದು, ಎದುರಿನಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದೆ.